ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ದೇಶದ ಯುವಕರಲ್ಲಿ ರಾಷ್ಟ್ರೀಯ ಏಕತೆ, ಸಮಗ್ರತೆ ಮತ್ತು ಸಾಮರಸ್ಯಗಳನ್ನು ಬೆಳೆಸುವುದು ಎನ್‌ಸಿಸಿಯ #NCC ಮುಖ್ಯ ಧ್ಯೇಯವಾಗಿದೆ ಎಂದು ಪ್ರಾಚಾರ್ಯ ಡಾ. ಕೆ.ಸಿ. ರವೀಂದ್ರ ಹೇಳಿದರು.
ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದ ಪ್ರಯುಕ್ತ 20 ಕರ್ನಾಟಕ ಬೇಟಾಲಿನ್ ಎನ್‌ಸಿಸಿ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಎನ್‌ಸಿಸಿಯು ಇಂದು ಯುವಕರಲ್ಲಿ ಶಿಸ್ತು, ನಾಯಕತ್ವ ಗುಣಗಳನ್ನು ಮೈಗೂಡಿಸುವುದರ ಜೊತೆಗೆ ಸಾಮಾಜಿಕ ಸೇವಾ ಮೌಲ್ಯಗಳನ್ನು ಬೆಳಸಲು ಸಹಕಾರಿಯಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಎನ್‌ಸಿಸಿ ಕೇರ್ ಟೇಕರ್ ಅಧಿಕಾರಿ ಶರತ್ ಪಿ ಮಾತನಾಡಿ “ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮವು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಯುವಕರಲ್ಲಿ ದೇಶದ ಬಗೆಗೆ ಅರಿವು ಹಾಗೂ ಕಾಳಜಿನ್ನು ಮೂಡಿಸುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಶ್ರೀ ಕೋಟೋಜಿರಾವ್ ಆರ್, ಅಭಿಲಾಷ್, ಬಾಲಾಜಿ ಮೊದಲಾದವರು ಉಪಸ್ಥಿತರಿದ್ದು, ಎನ್‌ಸಿಸಿ ಕೆಡೆಟ್ ಗಳಿಂದ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ಶ್ರಮದಾನವನ್ನು ಮಾಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post