ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕುಮದ್ವತಿ ಪ್ರೌಢಶಾಲೆಯಲ್ಲಿ 2025- 26ನೇ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಸತ್ ರಚನೆಯು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ನಡೆಸಲಾಯಿತು.
ಇಲಾಖೆಯ ಮಾರ್ಗಸೂಚಿಯಂತೆ ಚುನಾವಣಾ ಅಧಿಸೂಚನೆ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ, ನಾಮಪತ್ರ ಪರಿಶೀಲನೆ, ಚುನಾವಣಾ ಪ್ರಚಾರ, ಚುನಾವಣಾ ದಿನಾಂಕ, ಮತಎಣಿಕೆ ದಿನಾಂಕ ಮೊದಲಾದವುಗಳನ್ನು ಕ್ರಮಬದ್ಧವಾಗಿ ನಿರ್ವಹಿಸಲಾಯಿತು.ಶಾಲೆಯ ವಿವಿಧ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡಾ, ಶಾಲೆ ಸ್ವಚ್ಛತೆ, ಪ್ರವಾಸ ಇನ್ನಿತರ ಚಟುವಟಿಕೆಗಳಲ್ಲಿ ಜವಾಬ್ದಾರಿ ತೆಗೆದುಕೊಂಡು ಅದರಲ್ಲಿನ ನ್ಯೂನತೆಗಳನ್ನು ಮುಖ್ಯ ಶಿಕ್ಷಕರಿಗೆ ತೋರಿಸಿ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಈ ಚುನಾವಣೆ ನಡೆಸಲಾಯಿತು.
ಅಲ್ಲದೇ ಪಠ್ಯದಲ್ಲಿದ್ದನ್ನು ಪ್ರಾತ್ಯಕ್ಷಿಕವಾಗಿ ತೋರಿಸಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವುದು ಚುನಾವಣೆ ಮತ್ತು ಸಂಸತ್ ರಚನೆ ಉದ್ದೇಶವಾಗಿತ್ತು. ಮಕ್ಕಳಿಗೆ ಜವಾಬ್ದಾರಿ, ಮುಂದಾಳತ್ವ, ಎಲ್ಲರನ್ನು ಸಂಬಾಳಿಸುವ ಶಕ್ತಿಯ ವೃದ್ಧಿ ಶಾಲಾ ಸಂಸತ್ ಚುನಾವಣಯ ಗುರಿಯಾಗಿದೆ. ಶಾಲಾ ಸಂಸತ್ತು ಚುನಾವಣೆಯಲ್ಲಿ 15 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ವಿದ್ಯಾರ್ಥಿಗಳು ಶಿಸ್ತಿನಿಂದ ಅವರಿಗೆ ಇಷ್ಟವಾದ 10 ಅಭ್ಯರ್ಥಿಗಳಿಗೆ ಮತದಾನ ಮಾಡಿದರು.
ಈ ಶಾಲಾ ಸಂಸತ್ತು ಚುನಾವಣೆಯಲ್ಲಿ ಶಾಲಾ ಪ್ರಾಚಾರ್ಯರಾದ ವಿಶ್ವನಾಥ ಪಿ ರವರು ಮುಖ್ಯ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ ರವರು ಬೂತ್ ಅಧಿಕಾರಿಗಳಾಗಿ, ಶಿಕ್ಷಕರಾದ ರೇಷ್ಮಾ ಬಾನು,ಮಂಜುಳಾ ಪಾಟಿಲ್,ಲಲಿತ, ಚಂದ್ರಮತಿ, ರೇಖಾ, ಹಾಲಸ್ವಾಮಿ, ನಿಂಗಪ್ಪ, ಚಂದ್ರಶೇಖರ್ ,ಪರಮೇಶ್, ವಿಕ್ಟೋರಿಯಾ,ಮತದಾನ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.ವಿದ್ಯಾರ್ಥಿ ತೇಜಸ್ ಪೋಲಿಸ್ ಆಗಿ ಕಾರ್ಯ ನಿರ್ವಹಿಸಿದನು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post