ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಅನ್ಯಕೋಮಿನ ಯುವಕರ ಮಧ್ಯೆ ಕ್ಷುಲಕ ಕಾರಣಕ್ಕೆ ಆರಂಭವಾದ ಗಲಾಟೆಯಲ್ಲಿ ಯುವಕನೊಬ್ಬನಿಗೆ ಮತ್ತೊಬ್ಬ ಯುವಕ ಚಾಕುವಿನಿಂದ ಇರಿದ #Youth Stabbed ಘಟನೆ ಶನಿವಾರ (ಮಾ.15) ರಾತ್ರಿ ಪಟ್ಟಣದ ಮಾಸೂರು ಸರ್ಕಲ್’ನಲ್ಲಿ ನಡೆದಿದೆ.
ಪಟ್ಟಣದ ಮಾಸೂರು ಸರ್ಕಲ್’ನಲ್ಲಿ ವಾಹನ ದಟ್ಟಣೆ ಹೆಚ್ಚಾದ ಸಂದರ್ಭದಲ್ಲಿ ಬೈಕ್ ಹಾರ್ನ್ ಹೊಡೆಯುವ ವಿಷಯಕ್ಕೆ ಸಂಬAಧಿಸಿದAತೆ ಯುವಕರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
Also read: ಸಾಗರ-ಆನಂದಪುರಂ-ತಾಳಗುಪ್ಪ ವಾಹನ ಸವಾರರಿಗೆ ಮಹತ್ವದ ಸೂಚನೆ | ಈ ಮಾರ್ಗದಲ್ಲಿ ಬದಲಾವಣೆಯಾಗಿದೆ
ಈ ಸಂದರ್ಭ ಘಟನೆ ನಡೆದ ಸ್ಥಳದ ಪಕ್ಕದಲ್ಲಿಯೇ ಇದ್ದ ಹಣ್ಣಿನ ಅಂಗಡಿಯಲ್ಲಿದ್ದ ಚಾಕು ತೆಗೆದುಕೊಂಡು ಯುವಕನಿಗೆ ಇನ್ನೊಬ್ಬ ಯುವಕ ಚುಚ್ಚಿದ್ದಾನೆ. ಗಾಯಗೊಂಡ ಯುವಕನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.
ಚೂರಿ ಇರಿದ ಯುವಕನನ್ನು ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post