ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪರಿಸರ ಚೆನ್ನಾಗಿದ್ದರೆ ಮನುಷ್ಯನ ಆರೋಗ್ಯ ಚನ್ನಾಗಿರುತ್ತದೆ, ಘೋಷವಾಕ್ಯದೊಂದಿಗೆ ಈ ದಿನ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ ಎಂದು ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ವೀರೇಂದ್ರ ಅಭಿಪ್ರಾಯ ತಿಳಿಸಿದರು.
ಜೂನ್ 5, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಸಿ ನೆಡುವುದರ ಮುಖಾಂತರವಾಗಿ ಪರಿಸರ ದಿನಾಚರಣೆ ಆಚರಿಸಲಾಯಿತು.
ಪರಿಸರದ ಬಗ್ಗೆ ಎಲ್ಲರೂ ಮಾತನಾಡುವವರೇ ಆದರೆ ರಕ್ಷಣೆ ಮಾಡುವವರು ಯಾರು? ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಸರ್ಕಾರ ನಿಷೇಧಿಸಿ ವರ್ಷಗಳು ಕಳೆದರು ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಬದಲಿಗೆ ಒಂದಲ್ಲ ಒಂದು ರೀತಿ ಪರಿಸರವನ್ನ ಪ್ಲಾಸ್ಟಿಕ್ ಆವರಿಸಿತ್ತಲೇ ಇದೆ. ಅದೇ ರೀತಿ ಜನರು ಪ್ಲಾಸ್ಟಿಕ್ ನ ಅಪಾಯ ತಿಳಿದಿದ್ದರೂ ಬಳಸುತ್ತಿದ್ದಾರೆ ನಮ್ಮ ಎದುರು ಪ್ಲಾಸ್ಟಿಕ್ ಗೆ ಹಲವು ಪರ್ಯಾಯಗಳಿವೆ. ಇದರ ಬಳಕೆ ಮನಸ್ಸು ಮಾಡಬೇಕಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪರ್ವೇಜ್ ಅಹ್ಮದ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಹಾಗೂ ಕನ್ನಡ ಉಪನ್ಯಾಸಕರಾದ ಯೋಗರಾಜ್ ಆಂಗ್ಲ ಉಪನ್ಯಾಸಕರಾದ ಸಂಜೀವ್ ಕುಮಾರ್, ನಳಿನ ಪಾಟೀಲ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post