ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ #Keladi Shivappanayaka VV ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಜಲ ಕೃಷಿ ಮತ್ತು ಲಂಬ ಕೃಷಿಯ ಬಗ್ಗೆ ಗುಂಪು ಚರ್ಚೆಯನ್ನು ಚಿಕ್ಕಜೋಗಿಹಳ್ಳಿಯ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ನಗರೀಕರಣದಿಂದ ಒಂದು ಕಡೆ ಕೃಷಿ ಜಮೀನು ಕಡಿಮೆಯಾಗುತ್ತಾ ಬರುತ್ತಿದೆ ಇನ್ನೊಂದು ಕಡೆ ಜನಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಕಾರಣದಿಂದ ದಿನೇ ದಿನೇ ಆಹಾರದಲ್ಲಿ ಕೊರತೆ ಹೆಚ್ಚುತ್ತಿದೆ. ಇದಕ್ಕೆ ಪರಿಹಾರವೆಂಬಂತೆ ಜಲ ಕೃಷಿ ಮತ್ತು ಲಂಬ ಕೃಷಿಯನ್ನು ಬಳಸಿಕೊಂಡು ಮಣ್ಣು ಬಳಸದೆ, ಕೇವಲ ಪೋಷಕಾಂಶಯುಕ್ತ ನೀರಿನ ಸಹಾಯದಿಂದ ಬೆಳೆ ಬೆಳೆಯಬಹುದೆಂದು ಕೃಷಿ ವಿದ್ಯಾರ್ಥಿಗಳು ತಿಳಿಸಿಕೊಟ್ಟರು.
ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಾದ ಯಶಸ್ವಿನಿ ಮತ್ತು ಅವಿನಾಶ್ ರವರು ಜಲ ಕೃಷಿ ಮತ್ತು ಲಂಬ ಕೃಷಿಯ ಮಹತ್ವಗಳು ಹಾಗೂ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು.
ಈ ಎರಡೂ ತಂತ್ರಜ್ಞಾನಗಳು ಪರಿಸರ ಸ್ನೇಹಿಯಾಗಿದ್ದು, ಕೇವಲ ಕಡಿಮೆ ಜಾಗ ಮತ್ತು ಕಡಿಮೆ ನೀರಿನ ಬಳಕೆ, ಮಳೆಯ ಕೊರತೆ, ಹವಾಮಾನ ಬದಲಾವಣೆ, ಮಣ್ಣಿನ ಹಾನಿ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಇಂದಿನ ಕೃಷಿಗೆ ದೊಡ್ಡ ಮಟ್ಟದಲ್ಲಿ ನೆರವಾಗುತ್ತವೆ. ನಿಯಂತ್ರಿತ ಪರಿಸರದಲ್ಲಿ ಬೆಳೆ ಬೆಳೆಯುವ ಸಾಮರ್ಥ್ಯ ಇರುವುದರಿಂದ, ವರ್ಷಪೂರ್ತಿ ಉತ್ಪಾದನೆ ಸಾಧ್ಯವಾಗುತ್ತದೆ ಮತ್ತು ಎಲ್ಲ ಪ್ರದೇಶದಲ್ಲೂ ಆಹಾರ ಬೆಳೆಯಲು ಸಾಧ್ಯ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















