ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಶಾಲೆಯ ಶಿಕ್ಷಕರು ವೃತ್ತಿ ಬದ್ಧತೆ ತೋರುತ್ತಿರುವುದು ಶ್ಲಾಘನೀಯ ಎಂದು ಶಾಲಾ ಪ್ರಾಚಾರ್ಯರಾದ ಪಿ. ವಿಶ್ವನಾಥ ತಿಳಿಸಿದರು.
ನಗರದ ಭವಾನಿರಾವ್ ಕೇರಿಯ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ, ಉತ್ತಮ ಫಲಿತಾಂಶಗಳನ್ನು ಸಾಧಿಸುವಂತೆ ಮಾಡುವುದರ ಮೂಲಕ ತಮ್ಮ ಕೆಲಸವನ್ನು ಶ್ಲಾಘನೀಯವಾಗಿ ಮಾಡುತ್ತಿದ್ದಾರೆ ಎಂದು ಇದನ್ನು ಹೇಳಬಹುದು. ಶಿಕ್ಷಕರು ಕಠಿಣ ಪರಿಶ್ರಮ ಪಟ್ಟು ಮಕ್ಕಳನ್ನು ಸಮರ್ಥ ನಾಗರಿಕರನ್ನಾಗಿ ರೂಪಿಸಬೇಕು ಮತ್ತು ಶಿಕ್ಷಕರು ವೃತ್ತಿ ದೇವರ ಕೆಲಸವಷ್ಟೇ ಮುಖ್ಯವಾಗಿದ್ದು. ಎಲ್ಲಾ ವಿದ್ಯಾರ್ಥಿಗಳನ್ನು ಒಂದೇ ತರಹ ನೋಡಬೇಕು ಎಂದು ತಿಳಿಸಿದರು.
ಶಾಲಾ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ ಮಾತನಾಡಿ, ಶಿಕ್ಷಕರ ದಿನವು ನಮ್ಮ ಶಿಕ್ಷಕರ ಬಗ್ಗೆ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿರುವ ಅಜ್ಞಾನದ ಕತ್ತಲೆಯನ್ನು ತೆಗೆದು ಹಾಕಿ ಅದನ್ನು ಜ್ಞಾನದ ಬೆಳಕಿನಿಂದ ತುಂಬುತ್ತಾರೆ ಎಂದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವುದಲ್ಲದೆ, ಅವರ ಭವಿಷ್ಯವನ್ನು ಸಹ ರೂಪಿಸುತ್ತಾರೆ. ಅವರು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುತ್ತಾರೆ. ನಾವು ನಿರಂತರವಾಗಿ ಸುಧಾರಿಸಲು ಅವರು ನಮ್ಮ ತಪ್ಪುಗಳನ್ನು ಎತ್ತಿ ತೋರಿಸುತ್ತಾರೆ. ಜೀವನದ ಪ್ರತಿಯೊಂದು ಹೊಸ ತಿರುವಿನಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಎದುರಿಸಲು ಗುರುಗಳು ವಿದ್ಯಾರ್ಥಿಗಳಿಗೆ ಶಕ್ತಿಯನ್ನು ನೀಡುತ್ತಾರೆ. ಅವರು ನಾವಿಕನಂತೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುತ್ತಾರೆ ಎಂದರು.
ವಿದ್ಯಾ ಭಾರತೀಯ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮತ್ತು ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಪ್ರಥಮ ಬಹುಮಾನಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಮನರಂಜನೆಯ ಆಟಗಳನ್ನು ಆಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಿವ್ಯ ಮತ್ತು ಸಂಗಡಿಗರು ಪ್ರಾರ್ಥಿಸಿ, ಲಕ್ಷ್ಮೀ ಸ್ವಾಗತಿಸಿದರು. ಸ್ಪೂರ್ತಿ ವಂದಿಸಿ,ಉಷಾ ಮತ್ತು ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















