ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿದ್ಯಾರ್ಥಿಗಳು ತನ್ನನ್ನು ತಾನು ಅರ್ಥ ಮಾಡಿಕೊಂಡು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಸಹಜವಾಗಿ ಯಶಸ್ಸನ್ನು ಕಾಣಲು ಸಾಧ್ಯ ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಪ್ರತಿನಿಧಿಗಳು ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ. ಎಸ್. ಶಿವಕುಮಾರ್ ವಿದ್ಯಾರ್ಥಿಗಳಿಗೆ ಹೇಳಿದರು.
ಶುಕ್ರವಾರ ಪಟ್ಟಣದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯ ಅತಿಥಿನುಡಿಗಳನ್ನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವಿದ್ದು ಅದನ್ನು ಸರಿಯಾಗಿ ಬಳಸಿಕೊಂಡಾಗ ದೇಶ ವಿದೇಶಗಳಲ್ಲಿ ಅತ್ಯಂತ ಗೌರವದಿಂದ ಅತ್ಯುನ್ನತವಾದ ಹುದ್ದೆಗಳನ್ನು ಅಲಂಕರಿಸಲು ಸಾಧ್ಯ ಒತ್ತಡ ರಹಿತ ಕಲಿಕೆ ಯಶಸ್ಸಿನ ದಾರಿದೀಪವಾಗಿದೆ, ವಿದ್ಯಾರ್ಥಿಗಳಿಗೆ ಆತ್ಮಚರಿತ್ರೆ ಯಶಸ್ಸಿಗೆ ಪ್ರೇರಣೆಯಾಗುತ್ತದೆ.ಎಂದು ಅವರು ತಿಳಿಸಿದರು.
ಮತ್ತೋರ್ವ ಅತಿಥಿಗಳಾದ ರಾಜು ಜಡಿಯಪ್ಪ ಹಿರಿಯ ಉಪನ್ಯಾಸಕರು ಸ್ವತಂತ್ರ ಪದವಿ ಪೂರ್ವ ಕಾಲೇಜು ಶಿಕಾರಿಪುರ ಇವರು ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ
ದೇಶದ ಆರ್ಥಿಕ ಪ್ರಗತಿಗೆ ವಾಣಿಜ್ಯ ವಿಭಾಗವು ಅತ್ಯುನ್ನತ ಕೊಡುಗೆಯಾಗಿದೆ ಹಾಗೂ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ವಯೋನಿವೃತ್ತಿ ಸಹಜವಾಗಿದ್ದು ಆದರೆ ವೃತ್ತಿಪರ ಕೋಸುಗಳಾದ ಸಿಎ, ಸಿಎಸ್, ಐಸಿಡಬ್ಲ್ಯೂಎ, ಕೋಸುಗಳಲ್ಲಿ ಜೀವನ ಪರ್ಯಂತ ಮುಕ್ತ ಸೇವೆ ಸಲ್ಲಿಸಲು ಅವಕಾಶವಿದೆ ಆದ್ದರಿಂದ ವಿದ್ಯಾರ್ಥಿಗಳು ನಿರ್ದಿಷ್ಟವಾದ ಉದ್ದೇಶ ಗುರಿಗಳೊಂದಿಗೆ ಆತ್ಮಸ್ಥೈರ್ಯದ ಮೂಲಕ ಸದೃಢವಾದ ಮನಸ್ಸಿನಿಂದ ಉಪನ್ಯಾಸಕರ ಮಾರ್ಗದರ್ಶನ ಪಡೆದು ವಿಚಾರಗಳನ್ನು ಲಕ್ಷ ಕೊಟ್ಟು ತಿಳಿದುಕೊಂಡು ನಿರಂತರ ಕೃಷಿಯನ್ನು ಅಭ್ಯಾಸದಲ್ಲಿ ಮಾಡಿದಾಗ ಸುಲಭವಾಗಿ ಜಯಗಳಿಸಲು ಸಾಧ್ಯವಿದೆ ಎಂದು ಅವರು ಮಕ್ಕಳಿಗೆ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನು ಪ್ರಾಚಾರ್ಯ ಡಾ. ಎಮ್. ವೀರೇಂದ್ರ ಮಾತನಾಡಿ ಮನಸಿದ್ದರೆ ಮಾರ್ಗ ಎನ್ನುವ ನಿಟ್ಟಿನಲ್ಲಿ ತಾವೆಲ್ಲರೂ ಕಾಲೇಜಿನಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿದೆ ಎಂದು ಅವರು ಮಾತನಾಡಿದರು.
ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕು. ಅಶ್ವಿತಾ ಸಂಗಡಿಗರು ಪ್ರಾರ್ಥಿಸಿ, ಉಪನ್ಯಾಸಕ ಚಂದ್ರಶೇಖರ್ ಸ್ವಾಗತಿಸಿ, ಕು. ಚಂದ್ರಿಕಾ ವಂದಿಸಿ, ದೇವರಾಜ್ ನಿರೂಪಿಸಿದರು.
ವೇದಿಕೆಯಲ್ಲಿ ಪ್ರಾಚಾರ್ಯರಾದ ಡಾ. ಜಿ.ಎಸ್. ಶಿವಕುಮಾರ್, ಡಾ. ಎಂ.ವೀರೇಂದ್ರ, ಉಪನ್ಯಾಸಕರಾದ ಶ್ರೀಯುತ.ರಾಜು ಜಡಿಯಪ್ಪ, ಚಂದ್ರಶೇಖರ್, ಶಿವರಾಜ್,ಯೋಗರಾಜ್, ಸಂಜೀವ್ ಇತರರುಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post