ಕಲ್ಪ ಮೀಡಿಯಾ ಹೌಸ್
ಶಿಕಾರಿಪುರ: ಆಶಾ ಕಾರ್ಯಕರ್ತೆಯರಿಗೆ ಉಳ್ಳಿ ಫೌಂಡೇಶನ್ ವತಿಯಿಂದ ದಿನಸಿ ಕಿಟ್, ಮಾಸ್ಕ್ ಹಾಗು ಸ್ಯಾನಿಟೈಸರ್ ನೀಡಲಾಯಿತು.
ಫೌಂಡೇಶನ್ ನ ಅದ್ಯಕ್ಷ, ಪುರಸಭಾ ಸದಸ್ಯ ಉಳ್ಳಿ ದರ್ಶನ್ ಮಾತನಾಡಿ, ಕೊರೋನಾ ಸೋಂಕು ನಿಯಂತ್ರಿಸಲು ಜೀವದ ಹಂಗು ತೊರೆದು ಹಗಲಿರುಳು ಕರ್ತವ್ಯ ನಿರ್ವಹಿಸುತ್ತ ಕೋವಿಡ್ ವಿಪತ್ತು ನಿರ್ವಹಣೆಯಲ್ಲಿ ಹೋರಾಟ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದರು.
ಕೊರೋನಾ ಸೋಂಕಿತರ ಪ್ರಾಣ ಉಳಿಸುವಲ್ಲಿ ಮತ್ತು ಸೋಂಕು ಜನ ಸಮುದಾಯಕ್ಕೆ ಹರಡದಂತೆ ಬೇರು ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಶ್ರಮ ವಹಿಸುತ್ತಿದ್ದಾರೆ. ಆದರೆ, ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಮೂರು ತಿಂಗಳಿನಿಂದ ಗೌರವ ಧನವನ್ನು ನೀಡದೆ ಅವರ ಜೀವದ ಜೊತೆ ಚಲ್ಲಾಟವಾಡುತ್ತಿದೆ. ಗೌರವ ಧನವನ್ನೆ ನಂಬಿ ಜೀವನ ನಡೆಸುವ ಕಾರ್ಯಕರ್ತೆಯರು ಈಗ ಕುಟುಂಬ ನಿರ್ವಾಹಣೆ ಮಾಡುವುದು ದುಸ್ತಿರವಾಗಿದೆ. ರಾಜ್ಯ ಸರ್ಕಾರ ಕೂಡಲೇ ಬಾಕಿ ಗೌರವ ಧನದ ಜೊತೆಗೆ ಪ್ರೋತ್ಸಾಹ ಧನವನ್ನು ನೀಡಬೇಕೆಂದು ಆಗ್ರಹಿಸಿದರು..
ಈ ಸಂಧರ್ಭದಲ್ಲಿ ಜುನೈದ್ ಅಫಸರ್, ಶಶಾಂಕ್ ಕಾಗಿನಲ್ಲಿ, ಸುಹಾಸ್, ಹಾಗು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು..
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post