ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ನಿಮ್ಮ ಒಂದು ಮತಕ್ಕೆ ನವ ಭಾರತವನ್ನು ಕಟ್ಟುವ ಶಕ್ತಿ ಇದೆ ಎಂದು ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಹಿತ್ತಲ ಪ್ರಾಚಾರ್ಯದೇವಕುಮಾರ ತಿಳಿಸಿದರು.
ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ‘ರಾಷ್ಟ್ರೀಯ ಮತದಾರ ದಿನಾಚರಣೆ’ ಅಂಗವಾಗಿ (ಇ ಎಲ್ ಸಿ) ಮುಖ್ಯ ಅತಿಥಿಗಳಾಗಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನಾನುಡಿಗಳನ್ನಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಜಾಪ್ರಭುತ್ವವು ಇಡೀ ವಿಶ್ವದಲ್ಲೇ ವ್ವ್ಯವಸ್ಥಿತವಾದ ಸಂವಿಧಾನವನ್ನು ಹೊಂದಿ ನಂಬರ್ ಒನ್ ಭಾರತವಾಗಿದೆ ಜೊತೆಗೆ ಚುನಾವಣೆ ಎಂಬುದು ಮತದಾರರಿಗೆ ನಾಡ ಹಬ್ಬವಾಗಿದೆ ಬಾವಿ ನಾಯಕರನ್ನು ನಿರ್ಮಿಸಿ ನಮ್ಮ ಮೌಲ್ಯಗಳನ್ನು ಎತ್ತಿ ಹಿಡಿಯುವುದಾಗಿದೆ ಎಂದು ಸಂವಿಧಾನದ ವಿಧಿಗಳ ಕುರಿತು ಮಕ್ಕಳಿಗೆ ತಿಳಿಸಿದರು.
ತಾಲೂಕು ನೋಡಲ್ ಆಫೀಸರ್ ಡಾ. ವಸಂತ್ ನಾಯಕ್ ಪ್ರಸ್ತಾವಿಕ ನುಡಿಗಳಲ್ಲಿ ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾರರ ಸಕ್ರಿಯ ಪಾತ್ರ ಅಗತ್ಯವಾಗಿದ್ದು ಎಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಪಾಲುಗೊಂಡಾಗ ಮಾತ್ರ ಪ್ರಜಾಪ್ರಭುತ್ವದ ವ್ಯವಸ್ಥೆ ಬಲಗೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾ ದಾನಗಳಿಗಿಂತ ಮತದಾನವು ಶ್ರೇಷ್ಠದಾನ, ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಕನ್ನಡ ಉಪನ್ಯಾಸಕ ಶಿವರಾಜ್ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಶಿಕಾರಿಪುರ ಚುನಾವಣಾ ಶಾಖೆ ಶಿರಸ್ತೆದಾರ್ ಸುದೀರ್ ಮಾತನಾಡಿ, ಚುನಾವಣೆಯಲ್ಲಿ ಗುರುತಿನ ಚೀಟಿ ಮತ್ತು ಮತದಾರರು ಹೆಸರನ್ನು ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗವು ನಾಲ್ಕು ಹಂತಗಳಲ್ಲಿ ಹೆಸರನ್ನು ನೋಂದಾಯಿಸಲು ಅವಕಾಶವಿರುತ್ತದೆ ಜೊತೆಗೆ ಹೆಸರು,ತಿದ್ದುಪಡಿ ,ವರ್ಗಾವಣೆ ಕುರಿತು ನಮೂನೆ ಆರು,ಏಳು, ಎಂಟು, ಸಿ ಮತ್ತು ಎಸ್ ಸಂಪೂರ್ಣ ಮಾಹಿತಿ ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಿಗೆ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯು ಕಿರು ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಕನ್ನಡ ಪ್ರಬಂಧ ಸ್ಪರ್ಧೆಗೆ ತೀರ್ಪುಗಾರರನ್ನಾಗಿ ಯೋಗೇಶ್,ರೇಣುಕಾ ಭಾಗವಹಿಸಿದ್ದರು.
ತಾಲೂಕು ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕುಮಾರಿ ಅನುಷ್ಕಾ ನಾಡಿಗ ಸಂಗಡಿಗರು ಪ್ರಾರ್ಥಿಸಿದರು ಡಾ.ಎಂ ವೀರೇಂದ್ರ ಸ್ವಾಗತಿಸಿ ಯೋಗರಾಜ್ ವಂದಿಸಿ ಪರ್ವೀಜ್ ಅಹ್ಮದ್ ನಿರೂಪಿಸಿದರು.
ತಾಲೂಕು ಮಟ್ಟದ ‘ಮತದಾರರ ಸಾಕ್ಷರತಾ ಸಂಘದ’ ಕನ್ನಡ ಪ್ರಬಂಧ ಸ್ಪರ್ಧೆಯನ್ನು ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಡಾ. ವಸಂತ್ ನಾಯಕ್, ಡಾ. ಎಂ. ವೀರೇಂದ್ರ, ಯೋಗೇಶ್, ರೇಣುಕಾ, ಬಸವರಾಜ್, ಪರ್ವೀಜ್ ಅಹ್ಮದ್ ಚಂದ್ರಶೇಖರ್ ಶಿವರಾಜ್, ಯೋಗರಾಜ್, ಸಂಜೀವ್ ಒವಿಲೇಷ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















