ಶಿವಮೊಗ್ಗ: ಪಿಯುಸಿ, ಪದವಿ ಹಾಗೂ ಐಎಎಸ್ ಕನಸು ಕಂಡಿರುವ ವಿದ್ಯಾರ್ಥಿಗಳಿಗಾಗಿ ಜಿಲ್ಲೆಯ ತೇಜಸ್ ಸಂಸ್ಥೆಯ ವತಿಯಿಂದ ಪ್ರವೇಶ ಪರೀಕ್ಷೆಗೆ ಉಚಿತ ತರಬೇತಿ ಅವಕಾಶ ಕಲ್ಪಿಸಲಾಗುತ್ತಿದೆ.
ಈ ಯೋಜನೆ ಕುರಿತಾಗಿ ಮಾಹಿತಿ ಇಂತಿದೆ.
ಜಿಲ್ಲೆಯ ಎಲ್ಲಾ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾವಂತ ಬಾಲಕರಿಗೆ ಇದೊಂದು ಸದವಕಾಶ. ಬಾಲಕರಿಗೆ ಮಾತ್ರ ಅವಕಾಶವಿದೆ.
* ಪ್ರಸಕ್ತ ಸಾಲಿನಲ್ಲಿ ಹತ್ತನೇ ತರಗತಿ ಪೂರೈಸುವ ಸುಮಾರು 20 ಪ್ರತಿಭಾವಂತ ಬಾಲಕರನ್ನು ಆರಿಸಲಾಗುವುದು.
* ಎರಡು ವರ್ಷಗಳ ಪಿಯುಸಿ, 3 ವರ್ಷಗಳ ಪದವಿ ಶಿಕ್ಷಣವನ್ನು ಉಚಿತವಾಗಿ ನೀಡುವುದರೊಂದಿಗೆ ಅವರನ್ನು ಐಎಎಸ್ ಪ್ರವೇಶ ಪರೀಕ್ಷೆಗೆ 2 ವರ್ಷಗಳ ಕಾಲ ತರಬೇತುಗೊಳಿಸಲಾಗುವುದು.
* ಪ್ರಸಕ್ತ ಸಾಲಿನಲ್ಲಿ 11 ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣವನ್ನು, 11 ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಅರ್ಹತೆ:
* ಕಳೆದ ಸಾಲಿನಲ್ಲಿ 9 ನೇ ತರಗತಿ ಅಂತಿಮ ಪರೀಕ್ಷೆಯಲ್ಲಿ ಶೇ. 80 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿರಬೇಕು.
* ಹತ್ತನೇತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ. 85 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿರಬೇಕು
* ಆರ್ಥಿಕವಾಗಿ ಹಿಂದುಳಿವರಿಗೆ ಆದ್ಯತೆ
ಆಯ್ಕೆ ವಿಧಾನ:
* ಅರ್ಜಿ ಸಲ್ಲಿಸಲು ಕೊನೆಯ ಡಿಸೆಂಬರ್ 10, 2018 (ಮುಖ್ಯಶಿಕ್ಷಕರ ಶಿಫಾರಸ್ಸಿನೊಂದಿಗೆ)
* ಲಿಖಿತ ಪರೀಕ್ಷೆ ಜನವರಿ 6, 2019 ರ ಭಾನುವಾರದಂದು ನಡೆಯಲಿದೆ.
* ಕೇಂದ್ರಗಳು- ಶಿವಮೊಗ್ಗ, ಭದ್ರಾವತಿ, ಸಾಗರ, ತೀರ್ಥಹಳ್ಳಿ, ಶಿಕಾರಿಪುರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಪ್ಪ, ಕಳಸ ಪರೀಕ್ಷೆ ನಡೆಯುವ ಸ್ಥಳಗಳನ್ನು ಮುಂದೆ ತಿಳಿಸಲಾಗುವುದು.
* ವಿದ್ಯಾರ್ಥಿಯ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯುತ್ತದೆ.
* ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂದರ್ಶನದ ದಿನಾಂಕವನ್ನು ತಿಳಿಸಲಾಗುವುದು.
ಮನವಿ:
* ಅರ್ಹ ವಿದ್ಯಾರ್ಥಿಗಳು ಆಯ್ಕೆ ಪರೀಕ್ಷೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ಅಣಿಗೊಳಿಸಿ.
* ಆಯ್ಕೆ ಪರೀಕ್ಷೆಗೆ ಯಾವುದೇ ಶುಲ್ಕವಿಲ್ಲ.
* ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.
* ದೇಶದ ಸೇವೆಯಲ್ಲಿ ದಕ್ಷ, ಪ್ರಾಮಾಣಿಕ ಮತ್ತು ದೇಶನಿಷ್ಠ ಅಧಿಕಾರಿಗಳು ಇರಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ತೇಜಸ್ ನ ಉದ್ದೇಶಗಳು:
ನಮ್ಮ ದೇಶದ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ, ದೂರದೃಷ್ಟಿಯುಳ್ಳ ರಾಷ್ಟ್ರೀಯತೆಯ ಸುಸ್ಪಷ್ಟ ಕಲ್ಪನೆ ಹೊಂದಿರುವ ಅಪರಿಮಿತ ಉತ್ಸಾಹಿಗಳಾದ ನಾಗರಿಕ ಸೇವಾ ಅಧಿಕಾರಿಗಳಾಗಬೇಕೆಂಬ ಇಚ್ಛಾಶಕ್ತಿಯುಳ್ಳ ಆಕಾಂಕ್ಷಿಗಳನ್ನು ಗುರುತಿಸಿ, ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ತರಬೇತಿಯಿಂದ ಯುಪಿಎಸ್‌ಸಿ ಪರೀಕ್ಷೆಯನ್ನು ಉತ್ತೀರ್ಣ ಮಾಡಿಸಿ ಅವರು ಭಾರತೀಯ ಆಡಳಿತಾತ್ಮಕ ಸೇವೆಯನ್ನು ಕೈಗೊಳ್ಳುವಂತೆ ಮಾಡುವ ಉದ್ದೇಶವನ್ನು ಹೊಂದೆ.
ತೇಜಸ್ ನ ಯೋಜನೆ:
* ಇದರಲ್ಲಿ 10 ನೆಯ ತರಗತಿ ಓದುತ್ತಿರುವ ಮಕ್ಕಳಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಹಂಬಲ ಮತ್ತು ಸಂಕಲ್ಪ ಇರುವ ಮಕ್ಕಳನ್ನು ಪ್ರವೇಶ ಪರೀಕ್ಷೆ, ಸಂದರ್ಶನ ಮತ್ತು ಪೋಷಕರ ಒಪ್ಪಿಗೆ ಇಚ್ಛೆಯನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ.
* ಆಯ್ಕೆಯಾದಂತಹ ಮಕ್ಕಳಿಗೆ ವಸತಿ ಸೌಲಭ್ಯದೊಡನೆ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಪ್ರತಿಷ್ಠಿತ ಕಾಲೇಜುಗಳಲ್ಲಿ ಕೊಡಿಸಲಾಗುತ್ತದೆ. ಮತ್ತು ಇದರೊಂದಿಗೆ ಅವರನ್ನು ಕೇಂದ್ರಿಯ ಆಡಳಿತಾತ್ಮಕ ಸೇವೆಗಳ ಪ್ರವೇಶ ಪರೀಕ್ಷೆಯನ್ನು ಎದುರಿಸಲು ಅನುಭವಿ ಮಾರ್ಗದರ್ಶಕರಿಂದ ತರಬೇತುಗೊಳಿಸಲಾಗುತ್ತದೆ. ಅವರ ಶಕ್ತಿ ಸಾಮರ್ಥ್ಯಗಳನ್ನು ಅಳೆದು ಅವರು ಯಶಸ್ವಿಯಾಗುವಂತೆ ಅವರಿಗೆ ಶಿಕ್ಷಣ ತರಬೇತಿ ಮಾರ್ಗದರ್ಶನ ವ್ಯವಸ್ಥೆಯನ್ನು ಮಾಡಲಾಗುತ್ತದೆ.
* ಪ್ರತೀ ವರ್ಷ 30 ಜನ ವಿದ್ಯಾರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಆದ್ಯತೆಯೊಂದಿಗೆ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರವೇಶ ಪರೀಕ್ಷೆಯನ್ನು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾಡಲಾಗುತ್ತದೆ.
* ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ, ತರಬೇತಿ, ಊಟದ ವ್ಯವಸ್ಥೆ ಹಾಗೂ ವಸತಿ ವ್ಯವಸ್ಥೆಯನ್ನು ಸಂಪೂರ್ಣ ಉಚಿತವಾಗಿ ಕಲ್ಪಿಸಲಾಗಿದೆ. 2 ವರ್ಷದ ಪದವಿ ಪೂರ್ವ ಶಿಕ್ಷಣ, 3 ವರ್ಷದ ಪದವಿ ಶಿಕ್ಷಣ ಹಾಗೂ ನಂತರ 2 ವರ್ಷಗಳ ಪರೀಕ್ಷಾ ತಯಾರಿ ಒಟ್ಟು 7 ವರ್ಷಗಳ ಕಾಲ ಪ್ರತಿಯೊಬ್ಬ ವಿದ್ಯಾರ್ಥಿಯೂ ‘ತೇಜಸ್’ ನೆಲೆಯಲ್ಲಿ ಇದ್ದು ತಜ್ಞ ತರಬೇತುದಾರರಿಂದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಮಾರ್ಗದರ್ಶನ ಪಡೆದು ಪರೀಕ್ಷೆ ಎದುರಿಸುವಂತೆ ಸಜ್ಜುಗೊಳಿಸುವ ಯೋಜನೆ ನಮ್ಮದು.
* ಎಲ್ಲಾ ವಿದ್ಯಾರ್ಥಿ. ಅಭ್ಯರ್ಥಿಗಳಿಗೆ ಪರೀಕ್ಷೆಗೆ ಬೇಕಾದ ವಿಷಯ ಮತ್ತು ತಂತ್ರದ ತರಬೇತಿಯೊಂದಿಗೆ ಅವರಿಗೆ ನಾಡಿನ ನುರಿತ ಸಾಧಕರಿಂದ ಸಮಾಜ ಸೇವಕರಿಂದ ನಾಯಕತ್ವ, ಸಮಾಜ ಸೇವೆ, ದೇಶಭಕ್ತಿ, ಸಾಮಾಜಿಕ ಕಳಕಳಿ ಮತ್ತು ಬದ್ದತೆ, ಸಾಮಾನ್ಯ ಜ್ಞಾನ ಇತ್ಯಾದಿ ವಿಷಯಗಳಲ್ಲಿ ಅವರಿಗೆ ಮಾರ್ಗದರ್ಶನ ಮತ್ತು ತರಬೇತಿಯನ್ನು ಸಂವಾದ ಪ್ರಯೋಗಿಕ ಪ್ರದರ್ಶನ ಅನುಭವ ಕಥನ, ವಿಡಿಯೋ/ಸಿಡಿ/ಪಿಪಿಡಿ ಪ್ರದರ್ಶನ ಇತ್ಯಾದಿ ಮಾಧ್ಯಮಗಳ ಮೂಲಕ ಕೊಡಲಾಗುತ್ತದೆ.
* ಈ ಸಾಲಿನ ಲಿಖಿತ ಆಯ್ಕೆ ಪರೀಕ್ಷೆಯನ್ನು ಮುಂದಿನ ಜನವರಿಯಲ್ಲಿ ನಡೆಸಲಾಗುತ್ತದೆ ಇದಕ್ಕಾಗಿ 4 ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳನ್ನೂ ಪತ್ರ ಮುಖೇನ ಸಂಪರ್ಕ ಮಾಡಲಾಗುತ್ತದೆ.
ಮಾಹಿತಿಗಾಗಿ:
ಸಂಯೋಜಕರು: ತೇಜಸ್ ಪ್ರಕಲ್ಪ
ಮಾಧವ ನೆಲೆ, ಕೆಎಚ್‌ಬಿ ಕಾಲೋನಿ
ಕಲ್ಲಹಳ್ಳಿ ಶಿವಮೊಗ್ಗ- 577204
ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ
ಮಧುಕರ : 9980052300
ಸತೀಶ್ : 9480431811
Discussion about this post