ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆನಂದಪುರಂ: ಲಕ್ಷಾಂತರ ಜನರಿಗೆ ತಮ್ಮ ವಿದ್ಯೆಯ ಮೂಲಕ ಔಷಧಿ ನೀಡಿ ಹಲವು ಖಾಯಿಲೆಗಳನ್ನು ಗುಣಪಡಿಸುತ್ತಿದ್ದ ಖ್ಯಾತ ನಾಟಿ ವೈದ್ಯ ನರಸೀಪುರದ ನಾರಾಯಣ ಮೂರ್ತಿ(80) ಇಹಲೋಕ ತ್ಯಜಿಸಿದ್ದಾರೆ.
ನಿನ್ನೆ ರಾತ್ರಿ ಅವರು ವಿಧಿವಶರಾಗಿದ್ದು, ಈ ಮೂಲಕ ರಾಜ್ಯ ಮಾತ್ರವಲ್ಲ ಅಂತಾರಾಜ್ಯದಲ್ಲಿಯೂ ಸಹ ಪ್ರಖ್ಯಾತರಾಗಿದ್ದ ಮಲೆನಾಡಿನ ಕೊಂಡಿಯೊಂದು ಕಳಚಿದಂತಾಗಿದೆ.
ಪ್ರಮುಖವಾಗಿ ವಿವಿಧ ರೀತಿಯ ಕ್ಯಾನ್ಸರ್ ರೋಗಕ್ಕೆ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಔಷಧಿ ನೀಡುತ್ತಿದ್ದ ನಾರಾಯಣ ಮೂರ್ತಿ ಅವರು ಈವರೆಗೂ ಲಕ್ಷಾಂತರ ಮಂದಿಯ ಕಾಯಿಲೆಯನ್ನು ಗುಣಪಡಿಸಿದ್ದಾರೆ. ಒಂದು ಹಂತಕ್ಕೆ ಇವರ ಖ್ಯಾತಿ ಅಂತಾರಾಷ್ಟ್ರೀಯ ಮಟ್ಟಕ್ಕೂ ಹೋಗಿ, ಇವರು ನೀಡುವ ಔಷಧಿಗಳನ್ನು ಬೇರೆ ದೇಶಗಳಿಗೂ ಸಹ ಕಳುಹಿಸಿದ ಉದಾಹರಣೆಗಳಿವೆ.
ನಾಟಿ ಔಷಧಿಯಲ್ಲಿ ಕೊರೋನಾ ರೋಗವನ್ನೂ ಸಹ ಗುಣಪಡಿಸಬಹುದಾಗಿದ್ದು, ಇದಕ್ಕೆ ಅನುಮತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಇವರು ಪತ್ರ ಬರೆದಿದ್ದರು.
Get In Touch With Us info@kalpa.news Whatsapp: 9481252093
Discussion about this post