ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿರಾಳಕೊಪ್ಪ: ಜಲ ಶುದ್ದೀಕರಣ ಘಟಕದ ಹತ್ತಿರ ನಿಲ್ಲಿಸಿದ್ದ 5.50 ಲಕ್ಷ ರೂ. ಮೌಲ್ಯದ ಟ್ರಾಕ್ಟರ್ ಇಂಜಿನ್ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕಾರಿಪುರ ನಿವಾಸಿಗಳಾದ ಮಂಜುನಾಥ (29), ಹರೀಶ್ (21) ಮತ್ತು ನಾಗಭೂಷಣ (33) ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ, ಪೊಲೀಸ್ ವೃತ್ತ ನಿರೀಕ್ಷಕ ಗುರುರಾಜ ಎನ್. ಮೈಲಾರ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರಮೇಶ್ ಹಾಗೂ ಸಿಬ್ಬಂದಿ ಕೊಟ್ರೇಶಪ್ಪ, ಆದರ್ಶ, ಮಂಜುನಾಥ ಮತ್ತು ಕಾಂತೇಶ್ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post