ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಭದ್ರಾವತಿ |
ನಿಯಂತ್ರಣ ತಪ್ಪಿ ಸ್ಕೂಟರ್’ವೊಂದು ಅಂಗಡಿಗೆ ಡಿಕ್ಕಿ ಹೊಡೆದ ಪರಿಣಾಮ ಭದ್ರಾವತಿಯ ಯುವತಿ ಸ್ಪೂರ್ತಿ ಪುರಾಣಿಕ್ ಎಂಬಾಕೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸವಳಂಗ ರಸ್ತೆಯಲ್ಲಿನ ಕಲ್ಲಾಪುರದ ಬಳಿಯಲ್ಲಿ ಘಟನೆ ನಡೆದಿದ್ದು, ಸ್ಫೂರ್ತಿ ಸಾವನ್ನಪ್ಪಿದ್ದು, ಹಿಂಬದಿ ಸವಾರನಿಗೆ ತೀವ್ರ ಗಾಯಗಳಾಗಿವೆ.
ಮೃತ ಸ್ಫೂರ್ತಿ ಅವರು ಶಿವಮೊಗ್ಗ ಎನ್’ಇಎಸ್ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದರು. ಇವರ ಸ್ನೇಹಿತರಾದ ಆದರ್ಶ, ಸುಬ್ರಹ್ಮಣ್ಯ, ಓಂಕಾರ್, ಹರ್ಷ, ಛಾಯಾ, ಅಮಿತ್ ಅವರುಗಳು ಸವಳಂಗ ಬಳಿಯಿರುವ ವಿಂಡ್ ವೀಲ್ ನೋಡಲು ತೆರಳಿದ್ದರು.
Also read: ಬದುಕನ್ನು ಅರ್ಥೈಸಿಕೊಳ್ಳಲು ಭಾಷೆ ಅತ್ಯಗತ್ಯ: ಕೆ.ವಿ. ಅಕ್ಷರ ಅಭಿಮತ
ಎಲ್ಲ ಸ್ನೇಹಿತರೂ ದ್ವಿಚಕ್ರ ವಾಹನಗಳಲ್ಲಿ ತೆರಳಿದ್ದರು. ವಾಪಾಸ್ ಬರುವ ವೇಳೆ ಕಲ್ಲಾಪುರದ ಬಳಿಯಲ್ಲಿ ವಾಹನದ ನಿಯಂತ್ರಣ ತಪ್ಪಿ ಕಬ್ಬಿಣದ ಅಂಗಡಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ, ತೀವ್ರವಾಗಿ ಗಾಯಗೊಂಡಿದ್ದ ಸ್ಪೂರ್ತಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿಂಬದಿ ಕುಳಿತಿದ್ದ ಹರ್ಷ ಎಂಬಾತನಿಗೆ ತೀರ್ವ ಗಾಯಗಳಾಗಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post