ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನ ಅರಕೆರೆ ಕೋಡಿ ಹೊಸೂರಿನಲ್ಲಿ ವಾಸವಾಗಿರುವ ಮಹೇಶ್ವರಿ ಎಂಬ ಮಹಿಳೆಯ ಮನೆ ಮಳೆಗೆ ಬಹುತೇಕ ಶಿಥಿಲಗೊಂಡಿದ್ದು, ಇವರಿಗೆ ಶೀಘ್ರ ಮನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಕುರಿತಂತೆ ಪ್ರತಿಭಟನೆ ನಡೆಸಲಾಗಿದ್ದು, ಈ ಮಹಿಳೆಯ ನಿವಾಸ ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿದೆ. ಹೀಗಾಗಿ, ನೂತನವಾಗಿ ಮನೆ ಮಂಜೂರಾತಿಗೆ ಪಂಚಾಯ್ತಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಹೀಗಾಗಿ, ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು, ಇವರಿಗೆ ಮನೆ ಮಂಜೂರು ಮಾಡಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕ ವಿ. ವಿನೋದ್, ಜಿಲ್ಲಾ ಸಂಘಟಕಾ ಸಂಚಾಲಕ ಏಳುಮಲೈ ಹಾಗೂ ಚಂದ್ರು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಸಮಿತಿ ಸಂಚಾಲಕ ಬಿ. ಕೃಷ್ಣಪ್ಪ, ತಾಲೂಕು ಸಂಘಟನಾ ಸಂಚಾಲಕ ಅಣ್ಣಪ್ಪ ರವಿ ನಾಯಕ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಸಮಿತಿ ಸಂಘಟನಾ ಸಂಚಾಲಕಗಳಾದ ಹನುಮಂತಪ್ಪ, ಗುಣಶೇಖರ್, ವಸಂತಕುಮಾರ್, ರಾಜಪ್ಪ, ಮಂಜುನಾಥ್, ಹೋಬಳಿ ಸಂಚಾಲಕರಾದ ಹೊಳೆಹೊನ್ನೂರು ಹರೀಶ್ ಮತ್ತು ಪರಮೇಶಿ, ನವೀನ್, ಸಂತೋಷ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news






Discussion about this post