ಶಿವಮೊಗ್ಗ: ಇದೇ ಅಕ್ಟೋಬರ್ 11ರಂದು ಗುರುಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸುವುದರ ಹಿನ್ನೆಲೆಯಲ್ಲಿ ಬಿಎಚ್ ರಸ್ತೆಯ ತುಂಗಾ ಸೇತುವೆ ಬಳಿ ಇರುವ ಗಡಿ ಶ್ರೀ ಆಂಜನೇಯ ದೇವಾಲಯದಲ್ಲಿ ಬೃಹಸ್ಪತಿ ಮೂಲಮಂತ್ರ ಮಹಾಯಾಗ ಆಯೋಜಿಸಲಾಗಿದೆ.
ಅ.11ರಂದು ವೃಶ್ಚಿಕ ರಾಶಿ ಪ್ರವೇಶಿಸುವ ಗುರುಗ್ರಹವು 2019ರ ಅಕ್ಟೋಬರ್ 4ರವರೆಗೂ ಇದೇ ರಾಶಿಯಲ್ಲಿ ಸಂಚರಿಸುವುದರಿಂದ ಮೇಷ, ಮಿಥುನ, ಸಿಂಹ, ಕನ್ಯಾ, ವೃಶ್ಚಿಕ, ಧನಸ್ಸು ಮತ್ತು ಕುಂಭ ರಾಶಿಯವರಿಗೆ ಗುರುಬಲವಿರುವುದಿಲ್ಲ. ಹೀಗಾಗಿ, ಈ ರಾಶಿಯಲ್ಲಿ ಜನಿಸಿದವರಿಗೆ ಗುರುದೋಷ ನಿವೃತ್ತಿಗಾಗಿ ಅ.4ರ ನಾಳೆ ಬೆಳಗ್ಗೆ 8.30ರಿಂದ 12.30ರವರೆಗೆ ದೇವಾಲಯದಲ್ಲಿ ಮಹಾಯಾಗ ಏರ್ಪಡಿಸಲಾಗಿದೆ.
ಯಾಗದಲ್ಲಿ ಪಾಲ್ಗೊಳ್ಳುವವರು ಹಾಗೂ ಆಸಕ್ತರು ದೇವಾಲಯ ಆಡಳಿತ ಮಂಡಳಿ ಅಥವಾ 9590243729 ನ್ನು ಸಂಪರ್ಕಿಸಲು ಕೋರಲಾಗಿದೆ.
Discussion about this post