ಕಲ್ಪ ಮೀಡಿಯಾ ಹೌಸ್
ರಿಪ್ಪನ್ ಪೇಟೆ: ತಾಲೂಕಿನ ಗವಟೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
57 ವರ್ಷದ ಇವರಿಗೆ ಏ.5ರಂದು ಕೊರೋನಾ ದೃಢಪಟ್ಟ ಹಿನ್ನಲೆಯಲ್ಲಿ ಮೆಗ್ಗಾನ್‌ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮಣಿಪಾಲ್‌ಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿತ್ರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗವಟೂರಿನ ಹೊರವಲಯದಲ್ಲಿ ಇಂದು ಅವರ ಅಂತ್ಯಸಂಸ್ಕಾರ ನಡೆಸಲಾಗಿದುದ, ಇದು ಜಿಲ್ಲೆಯಲ್ಲಿ ಕೊರೋನ ಎರಡನೆಯ ಅಲೆಗೆ ಮೂರನೆ ಬಲಿಯಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಮೊದಲನೆಯದು ಹೊರ ಜಿಲ್ಲೆಯಿಂದ ಬಂದು ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದರು. ಇನ್ನೋರ್ವರು ಸೊರಬದಲ್ಲಿ ಸೋಂಕಿನಿಂದ ಮೃತಪಟ್ಟಿದ್ದರು. ಇದು ಮೂರನೆಯ ಬಲಿಯಾಗಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post