ಶಿವಮೊಗ್ಗ: ದೀಪಾವಳಿ ಆರಂಭವಾಗಿರುವ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ಆಚರಿಸುವಂತೆ ಜಿಲ್ಲೆಯಲ್ಲೂ ಸಹ ಅದ್ದೂರಿ ಆಚರಣೆಗೆ ಜನರು ಸಿದ್ದತೆ ನಡೆಸಿದ್ದಾರೆ.
ನಾಳೆ ಹಾಗೂ ನಾಡಿದ್ದು, ದೀಪಾವಳಿ ಮಹಾಲಕ್ಷ್ಮೀ ಪೂಜೆಯನ್ನು ವೈಭವದಿಂದ ಎಲ್ಲೆಡೆ ನೆರವೇರಿಸುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಾಗೂ ಸಾರ್ವಜನಿಕರ ಭದ್ರತೆಗೆ ಯಾವುದೇ ತೊಂದರೆಯುಂಟಾಗದಿರಲಿ ಎಂದು ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಅಂಶಗಳನ್ನು ಒಳಗೊಂಡು ಪ್ರಕಟಣೆಯನ್ನು ಹೊರಡಿಸಿದ್ದು, ಅದರಲ್ಲಿನ ಕಡ್ಡಾಯ ಅಂಶಗಳು ಈ ಕೆಳಕಂಡಂತಿವೆ.
1. ಬ್ಯಾಂಕಿನಿಂದ ಒಡವೆ ಮತ್ತು ಹಣವನ್ನು ತಂದು ಮನೆಯಲ್ಲಿ ಮಹಾಲಕ್ಷ್ಮಿ ಪೂಜೆ ಮಾಡಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಬ್ಯಾಂಕಿನಿಂದ ಹಣ ಮತ್ತು ಒಡವೆಗಳನ್ನು ತರುವಾಗ ಹೆಚ್ಚಿನ ಜವಾಬ್ದಾರಿಯಿಂದ ಇಟ್ಟು ಕೊಳ್ಳುವುದು.
2. ಹೆಣ್ಣು ಮಕ್ಕಳು ಒಡವೆಗಳನ್ನು ಹಾಕಿಕೊಂಡು ದೇವಸ್ಥಾನದಿಂದ ದೇವಸ್ಥಾನಕ್ಕೆ ಮತ್ತು ಮನೆಯಿಂದ ಮನೆಗೆ ಒಂಟಿಯಾಗಿ ಹೋಗದೇ ತಮ್ಮ ಜೊತೆಯಲ್ಲಿ ಕುಟುಂಬ ಸದಸ್ಯರನ್ನು ಕರೆದುಕೊಂಡು ಹೋಗುವುದು ಹಾಗೂ ಹೆಚ್ಚಿನ ಜವಾಬ್ದಾರಿಯಿಂದ ಇರುವುದು.
3. ಸರಗಳ್ಳರು ಹಾಗೂ ಕಳ್ಳಕಾಕರುಗಳ ಮೇಲೆ ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹೆಚ್ಚಿನ ನಿಗಾವಣೆ ಇಟ್ಟಿರುತ್ತಾರೆ.
4. ಬ್ಯಾಂಕಿನಿಂದ ಒಡವೆಗಳನ್ನು ಹಾಗೂ ಹಣವನ್ನು ತರುವಾಗ ಮತ್ತು ಪುನಃ ಬ್ಯಾಂಕಿನಲ್ಲಿ ಜಮಾ ಮಾಡುವಾಗ ಹೆಚ್ಚಿನ ಮುತುವರ್ಜಿ ವಹಿಸುವುದು.
5. ಪೊಲೀಸ್ ಇಲಾಖೆಯಿಂದ24 ಗಂಟೆಳ ಕಾಲಚೆಕ್‍ಪೋಸ್ಟ್ ಗಳನ್ನು ತೆರೆದಿದ್ದು, ಎಲ್ಲಾ ವಾಹನಗಳ ಪರಿಶೀಲನೆ ನಡೆಸಲಾಗುತ್ತದೆ.
6. ಕ್ರೈಂ ಸಿಬ್ಬಂದಿಗಳನ್ನು ಹಾಗೂ ಸಾದಾ ಉಡುಪಿನಲ್ಲಿ ಸಿಬ್ಬಂದಿಗಳನ್ನು ನೇಮಿಸಿಸರಗಳ್ಳರುಗಳ ಮೇಲೆ ನಿಗಾವಣೆ ಇಡಲಾಗಿದೆ.
7. ಸಾರ್ವಜನಿಕರು ಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಹಣ ಮತ್ತು ಒಡವೆಗಳನ್ನು ಇಡದೇ ತಮ್ಮ ಜೊತೆಯಲ್ಲಿಯೇ ಜವಾಬ್ದಾರಿಯಿಂದ ಇಟ್ಟುಕೊಳ್ಳುವುದು.
8. ಮಹಾಲಕ್ಷ್ಮೀ ದೇವಿಯನ್ನು ಮನೆಗಳಲ್ಲಿ ಕಿಟಕಿ ಬಳಿ ಅಥವಾ ಮನೆಯ ಮುಖ್ಯ ದ್ವಾರದ ಬಳಿ ಪ್ರತಿಷ್ಠಾಪಿಸಿ ಪೂಜೆ ಸಲುವಾಗಿ ದೇವರಿಗೆ ಹಾಕಲಾಗುವ ಆಭರಣಗಳು, ದೇವರ ಪೂಜೆಗೆ ಬಳಕೆ ಮಾಡುವ ಬೆಳ್ಳಿ ಸಾಮಾಗ್ರಿಗಳ ಮತ್ತು ಹಣದ ಸುರಕ್ಷತೆ ಬಗ್ಗೆ ನಿಗಾವಹಿಸುವುದು.
9. ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲು ಜಿಲ್ಲಾ ಪೊಲೀಸ್ ವತಿಯಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.
10. ಪೊಲೀಸ್ ಇಲಾಖೆಯು ಸಾರ್ವಜನಿಕ ಹಿತದೃಷ್ಟಿಯಿಂದಸಿಸಿಟಿವಿ ದೃಶ್ಯಾವಳಿಗಳಮೇಲೆ ಹೆಚ್ಚಿನ ನಿಗಾವಣೆಯನ್ನು ಇಡಲಾಗಿರುತ್ತದೆ.
ಒಟ್ಟಾರೆ ಸಾರ್ವಜನಿಕರು ಮಹಾಲಕ್ಷ್ಮಿ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸಲು ಕೋರಿದೆ.
ಸಾರ್ವಜನಿಕರು ಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅವಗಡಗಳು ಮತ್ತು ಕಾನೂನು ಉಲ್ಲಂಘನೆ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಅಥವಾ ಜಿಲ್ಲಾ ನಿಸ್ತಂತು ಘಟಕ, ಶಿವಮೊಗ್ಗಕ್ಕೆ ಕರೆ ಮಾಡಿ ಮುಕ್ತವಾಗಿ ಸಮಸ್ಯೆಗಳನ್ನು ತಿಳಿಸಲು ಅವಕಾಶವಿರುತ್ತದೆ.
ದೂರವಾಣಿ ಸಂಖ್ಯೆ & ಪೊಲೀಸ್ ಅಧಿಕಾರಿಗಳ ವಿವರ
08182- 261400 ಜಿಲ್ಲಾ ರಕ್ಷಣಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ
08182-261402 ಹೆಚ್ಚುವರಿ ರಕ್ಷಣಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ
08182- 261413
08182- 270521 ಜಿಲ್ಲಾ ಕಂಟ್ರೋಲ್ ರೂಂ, ಜಿಲ್ಲಾ ಪೊಲೀಸ್ ಕಛೇರಿ, ಶಿವಮೊಗ್ಗ
08182- 261404 ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಉಪ ವಿಭಾಗ
08181- 220388 ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪ ವಿಭಾಗ
08183- 226082 ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗ
08187- 222442 ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ
08282-274252 ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ
08184- 272122 ವೃತ್ತ ನಿರೀಕ್ಷಕರು, ಸೊರಬ ಉಪ ವಿಭಾಗ
Discussion about this post