ಸ್ವದೇಶಿ ಸಂಸ್ಕೃತಿಯನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗುವುದು ಭಾರತೀಯರ ಕರ್ತವ್ಯ ಎಂದು ಸಿರಿಗಿರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ತಿಳಿಸಿದರು.
Also read: ಮಕ್ಕಳಂತೆ ಆಡಿ ನಲಿದ ಪೋಷಕರು | ಜೈನ್ ಪಬ್ಲಿಕ್ ಶಾಲೆಯಲ್ಲೊಂದು ಅಪರೂಪದ ಸಮ್ಮಿಲನ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ BSYadiyurappa ಮಾತನಾಡಿ, ಸ್ವದೇಶದ ವಸ್ತುಗಳ ಉತ್ತೇಚಿಸುತ್ತಿರುವ ಉದ್ದೇಶ ಸ್ವದೇಶ್ ಮೇಳ ಹಿಂದಿದೆ ಸ್ವದೇಶಿ ಆಂದೋಲನ ಸ್ವಾವಲಂಭನೆಯ ಚಳುವಳಿಯಾಗಿದೆ. ಸ್ವದೇಶಿಯನ್ನ ಗಾಂಧಿಜಿ ಆತ್ಮ ಸ್ವರಾಜ್ ಎಂದು ಬಣ್ಣಿಸಿದ್ದರು. ಬಟ್ಟೆ ಉತ್ಪಾದಿಸಿ ಸ್ವಾಲಂಭನೆಯ ಗ್ರಾಮ ಎಂದು ಗುರುತಿಸಬೇಕೆಂದು ಎಂದರು.
ಸ್ವದೇಶಿ ಮೇಳದ ಸಂಚಾಲಕ ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಸ್ವದೇಶಿ ಚಿಂತನೆ ಬ್ರಿಟಿಷರು ಬಂಗಾಳದ ವಿಭಜನೆಗೆ ಕೈಹಾಕಿದಾಗ ಸ್ವಾತಂತ್ರ್ಯ ಹೋರಾಟಗಾರರು ಇಂಗ್ಲೆಂಡ್ನ ಉತ್ಪನ್ನಗಳನ್ನು ಬಹಿಷ್ಕರಿಸಿ ವಂಗ ಬಂಗ ಚಳುವಳಿಯ ಮೂಲಕ ತಕ್ಕ ತಿರುಗೇಟು ನೀಡಿದರು.
ಶಾಸಕ ಡಿ.ಎಸ್. ಅರುಣ್ DSArun ಮಾತನಾಡಿ ಮೋದಿ ಪ್ರಧಾನಿಯಾದ PMModi ಮೇಲೆ ದೇಶದ ಜನರಿಗೆ ಸ್ವಾವಲಂಬಿ ಭಾರತ ಎಂದರೇ ಏನು ಅನ್ನುವುದು ಅರಿವಾಯಿತು. ಈ ಮೇಳದಲ್ಲಿ ನೋಡಲ್ಸ್, ಫೀಜಾ, ಬರ್ಗರ್ ಇಲ್ಲ, ಸ್ವದೇಶಿ ಸ್ವಾದಗಳಿವೆ. 270ಕ್ಕೂ ಹೆಚ್ಚು ಸ್ಟಾಲ್ಗಳಿವೆ. ಮೇಕಿಂಗ್ ಇಂಡಿಯಾ, ಸ್ಕಿಲ್ ಇಂಡಿಲಾ ಮತ್ತು ಸರ್ಕಾರದ ಯೋಜನೆಗಳ ಅರಿವನ್ನು ಮೂಡಿಸಲಾಗುತ್ತಿದೆ ಸ್ವದೇಶಿ ತಳಿಗಳಿಗೆ ಗೋಪೂಜೆ ನಡೆಯುತ್ತಿದೆ. ಸುವರ್ಣ ಮತ್ತು ತಂಡದವರಿಂದ 60*60 ಬೃಹತ್ ಅತ್ಯಾಕರ್ಷಕ ರಂಗೋಲಿ ಹಾಕಲಾಗಿದೆ. ಸ್ವದೇಶಿ ಚಿಂತನೆಗೆ ಒತ್ತು ನೀಡಲಾಗಿದ್ದು, ಪ್ರಾರಂಭಿಕ ದಿನಂದಂದೆ 10 ಸಾವಿರಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದ್ದು ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ, ಸ್ವದೇಶಿ ಮೇಳದ ಆಯೋಜಕರಾದ ಡಾ.ಧನಂಜಯ ಸರ್ಜಿ, ಹರ್ಷ ಕಾಮತ್, ದತ್ತಾತ್ರಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post