ಶಿವಮೊಗ್ಗ: ಇಎಸ್’ಐಎಸ್ ಆಸ್ಪತ್ರೆಯಿಂದ ಇಎಸ್’ಐ ಎಂದು ಶಿಫಾರಸು ಮಾಡಲಾಗುವುದು. ಈ ಮೂಲಕ ಶಿವಮೊಗ್ಗ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ರಾಗಿಗುಡ್ಡದ ಕುವೆಂಪು ಬಡಾವಣೆಯಲ್ಲಿ ಇ.ಎಸ್.ಐ ಸೂಪರ್ ಮಲ್ಟಿಸ್ಪೆಷಾಲಿಟಿ 100 ಹಾಸಿಗೆ ಆಸ್ಪತ್ರೆಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇಎಸ್’ಐಎಸ್ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿಕೊಡಲಿದ್ದೇನೆ ಇಎಸ್’ಐಎಸ್. ಇಎಸ್’ಐಎಸ್ ಎಂದರೆ ಇದು ರಾಜ್ಯ ಸರ್ಕಾರದ ನಿಯಂತ್ರಣದ ಆಸ್ಪತ್ರೆ ಆದರೆ ಕೇಂದ್ರ ಸರ್ಕಾರ ಶೇ.80 ರಷ್ಟು ಅನುದಾನ ಕೇಂದ್ರ ವೇ ನೀಡುವುದರಿಂದ ಈ ಆಸ್ಪತ್ರೆಯನ್ನ ಇಎಸ್’ಐ ಎಂದು ತಿಳಿಸಬೇಕು. ಇದಕ್ಕೆ ಶಿಫಾರಸು ಮಾಡಲು ಸಿದ್ದವೆಂದರು ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆಗೆ ಇದು ಬಹಳಷ್ಟು ಅನುಕೂಲವಾಗಲಿದೆ ಎಂದರು.
ಈ ಸಮಯದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ, ಶಾಸಕರಾದ ಆಯನೂರು ಮಂಜುನಾಥ್, ಆರಗ ಜ್ಞಾನೇಂದ್ರ, ಮೇಯರ್ ಲತಾ ಗಣೇಶ್, ಉಪಮೇಯರ್ ಚನ್ನಬಸಪ್ಪ, ಪಾಲಿಕೆ ಸದಸ್ಯ ಧೀರಾಜ್ ಹೊನ್ನೆವಿಲೆ ಇದ್ದರು.
Discussion about this post