ಶಿವಮೊಗ್ಗ: ಲೋಕಸಭಾ ಉಪಚುನಾವಣೆಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು ಇದೇ ತಿಂಗಳು 21 ರಿಂದ ಜಿಲ್ಲೆಯ ಪ್ರತಿ ಹೋಬಳಿಗೂ ನಾನು ತೆರಳಿ ಮಧು ಬಂಗಾರಪ್ಪ ಪರ ಪ್ರಚಾರ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನೆಹರೂ ಕ್ರೀಡಾಂಗಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಚುನಾವಣೆ ಯಾವುದೋ ವ್ಯಕ್ತಿಗಳ ನಡುವಿನ ಜಿದ್ದಾಜಿದ್ದಯ ಕಣವಲ್ಲ. ಆದರೆ ಅಭಿವೃದ್ದಿಯ ಪರವಾಗಿ ನಿಂತಿರುವ ನಮಗೆ ತಾವುಗಳು ಬೆಂಬಲಿಸಬೇಕು ಎಂದು ವಿನಂತಿಸಿದರು.
ಬಿಜೆಪಿ ರೈತರ ಪರ ಇಲ್ಲ
ರಾಷ್ಟ್ರಿಕೃತ ಬ್ಯಾಂಕ್ ಗಳಿಗೆ ರೈತರ ಸಾಲ ಮನ್ನಾಗಳಿಗೆ ನನ್ನ ಬಳಿ ಹಣ ಇದೆ. ತೆಗೆದುಕೊಂಡು ಹೋಗಿ ಬನ್ನಿ ಎಂದರೆ ಬರುತ್ತಿಲ್ಲ. ಆದರೆ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಿದ್ದೇನೆ ಎಂದಾಕ್ಷಣ ಬಿಎಸ್ ವೈ ಅವರು ಹೇಗೆ ಸಾಧ್ಯವೆಂದು ಕೇಳುತ್ತಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಲು ಹಣವಿದ್ದು ಅದನ್ನು ತೆಗೆದುಕೊಂಡು ಹೋಗಲು ದೆಹಲಿಯ ಅರ್ಥ ಸಚಿವರ ಮೇಲೆ ಒತ್ತಡ ಹಾಕುವುದನ್ನು ಬಿಟ್ಟು ನಮ್ಮನ್ನು ಮತ್ತು ಮೈತ್ರಿ ಸರ್ಕಾರವನ್ನು ಬಿಜೆಪಿ ಟೀಕಿಸುತ್ತದೆ ಎಂದು ಕಿಡಿಕಾರಿದರು.
ಕೇಂದ್ರದ ಅರ್ಥ ಸಚಿವ ಮತ್ತು ಆರ್ ಬಿಐ ಮೇಲೆ ಬಿಜೆಪಿ ಇದೇ ಒತ್ತಡ ಹಾಕಿ ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ಮನ್ನಾ ಮಾಡಿದ ಹಣ ತೆಗೆದುಕೊಂಡು ಹೋದರೆ ರೈತ ನಿರಾಳನಾಗುತ್ತಾನೆ. ಈ ಕೆಲಸವೇಕೆ ಬಿಜೆಪಿಗೆ ತೊಳಿಯಲ್ಲ ಎಂದರು.
Discussion about this post