ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿವಮೊಗ್ಗ #Shivamogga ಲೋಕಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧೆ ಘೋಷಣೆ ಮಾಡಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ #Shikaripura ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ #BSYediyurappa ಅವರ ತವರು ಕ್ಷೇತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ #BYVijayendra ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿರುವ ಶಿಕಾರಿಪುರದಲ್ಲಿ ಅದ್ದೂರಿಯಾಗಿ ಪ್ರಚಾರ ನಡೆಸಿದರು.

ದೇವಾಲಯದಿಂದ ತೇರುಬೀದಿ, ಬಸ್ ನಿಲ್ದಾಣ, ಶಿರಾಳಕೊಪ್ಪ ವೃತ್ತ, #Shiralakoppa ದೊಡ್ಡೇಕೇರಿ ಗಿಡ್ಡೇಶ್ವರ ದೇವಾಲಯ ಸೇರಿದಂತೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಮೆರವಣಿಗೆ ಸಾಗಿತು.
ಮೆರವಣಿಗೆಯಲ್ಲಿ ಕೆ.ಎಸ್. ಈಶ್ವರಪ್ಪ, ಕೆ.ಈ. ಕಾಂತೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ನನಗೆ ಮಾತ್ರವಲ್ಲ ಸಿ.ಟಿ. ರವಿ, ನಳೀನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಅವರುಗಳಿಗೂ ಟಿಕೇಟ್ ನೀಡಲಿಲ್ಲ. ನಾವುಗಳು ಎಂದಿಗೂ ಪಕ್ಷ ಹಾಕಿದ ಗೆರೆ ದಾಟಿದವರಲ್ಲ. ಆದರೂ ನಮಗೆಲ್ಲಾ ಅನ್ಯಾಯವಾಯಿತು.

ನಾನು ಈಗ ಕೈಗೊಂಡಿರುವ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಬದಲಾವಣೆ ಅನಿವಾರ್ಯವಾಗಿದೆ. ನನಗೆ ಯಾಕೆ ಅನ್ಯಾಯ ಮಾಡಿದಿರಿ? ಎಂದು ಪ್ರಶ್ನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post