ಶಿವಮೊಗ್ಗ: ರಾಜ್ಯದ ಉಪಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಈ ಕುರಿತಂತೆ ಅಧಿಕೃತ ಘೋಷಣೆ ಮಾಡಿರುವ ಜಿಲ್ಲಾಧಿಕಾರಿ ಕೆ. ದಯಾನಂದ್, ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಅ. 9ರಂದು ಚುನಾವಣಾ ಅಧಿಸೂಚನೆ – ಅ.16 ನಾಮಪತ್ರ ಸಲ್ಲಿಕೆಗೆ ಕಡೆ ದಿನ, ಅ.17 ನಾಮಪತ್ರ ಪರಿಶೀಲನೆ, ಅ.20 ನಾಮಪತ್ರ ಹಿಂತೆಗೆದುಕೊಳ್ಳಲು ಕಡೆ ದಿನ, ನವೆಂಬರ್ 3ರಂದು ಮತದಾನ, ನ. 6 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಈಗಾಗಲೇ ಎಲ್ಲಾ ಕ್ರಮ ಎಂದಿರುವ ಜಿಲ್ಲಾಧಿಕಾರಿಗಳು, ರಾಜಕೀಯ ಪಕ್ಷಗಳು, ವ್ಯಕ್ತಿಗಳ ಪ್ರಚಾರದ ಬ್ಯಾರ್ನ, ಪೋಸ್ಟರ್ ಇತ್ಯಾದಿಗಳನ್ನು 24 ಗಂಟೆಗಳ ಒಳಗಾಗಿ ತೆರವುಗೊಳಿಸಲು ಸೂಚನೆ ನೀಡಿದ್ದಾರೆ.
ರಾಜಕೀಯ ಪಕ್ಷಗಳು ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವ ಪೂರ್ವದಲ್ಲಿ ಅನುಮತಿಯನ್ನು ಕಡ್ಡಾಯ ಎಂದು ತಿಳಿಸಿದ್ದಾರೆ.
162 ಸೆಕ್ಟರ್ ಅಧಿಕಾರಿಗಳು, 9 ಅಕೌಂಟಿಂಗ್ ತಂಡಗಳು, 39 ಫ್ಲೈಯಿಂಗ್ ಸ್ಕ್ವಾರ್ಡ್‌ಗಳು, 37 ಸ್ಟಾಟಿಕ್ ಸರ್ವೇಲೆನ್ಸ್ ತಂಡಗಳು, 8 ಮಾದರಿ ನೀತಿ ಸಂಹಿತೆ ಜಾರಿ ನೋಡಲ್ ಅಧಿಕಾರಿಗಳು, 27 ವಿಡಿಯೊ ಸರ್ವೇಲೆನ್ಸ್ ತಂಡಗಳು ಹಾಗೂ 7 ವಿಡಿಯೋ ವ್ಯೂವಿಂಗ್, ಮಾದರಿ ನೀತಿ ಸಂಹಿತೆ ಜಾರಿಗಾಗಿ ಈಗಾಗಲೇ ತಂಡಗಳನ್ನು ರಚನೆ ಮಾಡಲಾಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 2,22,003 ಅರ್ಹ ಮತದಾರರಿದ್ದು, ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ 2,10,997, ಭದ್ರಾವತಿ 2,06,678, ಶಿವಮೊಗ್ಗ ನಗರ 2,56,236, ತೀರ್ಥಹಳ್ಳಿ 1,82,663, ಶಿಕಾರಿಪುರ 1,88,684, ಸೊರಬ 1,84,492, ಸಾಗರ 1,93,758 ಸೇರಿದಂತೆ ಒಟ್ಟು 16,45,511 ಮತದಾರರು ಮತ ಚಲಾವಣೆ ಮಾಡಲಿದ್ದಾರೆ.
Discussion about this post