ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ವಿಐಎಸ್’ಎಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದು ಬೇಡ ಎಂಬ ಒತ್ತಾಯಕ್ಕೆ ಪೂರಕವಾಗಿ ವಿಐಎಸ್’ಎಲ್ ಉಳಿಸಿ ಹೋರಾಟ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು, ಈ ಮೂಲಕ ಪಕ್ಷಾತೀತ ಹೋರಾಟಕ್ಕೆ ಉಕ್ಕಿನ ನಗರಿ ಸಜ್ಜಾಗಿ ನಿಂತಿದೆ.
ಈ ಕುರಿತಂತೆ ಮಹತ್ವದ ಸಭೆ ನಡೆಸಲಾಗಿದ್ದು, ಬಿಜೆಪಿ ಮುಖಂಡ ಎಸ್.ಎನ್. ಬಾಲಕೃಷ್ಣ ನೇತೃತ್ವದಲ್ಲಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗಿದ್ದು, ಇದೊಂದು ಪಕ್ಷಾತೀತ ಹೋರಾಟವಾಗಿದ್ದು, ಕಾರ್ಖಾನೆ ಭದ್ರಾವತಿಯ ಅಸ್ಮಿತೆ. ಇದನ್ನ ಯಾವುದೇ ಕಾರಣಕ್ಕೂ ಮುಚ್ಚುವುದಾಗಲಿ ಅಥವಾ ಖಾಸಗೀಕರಣಗೊಳಿಸುವುದಾಗಲಿ ಆಗಬಾರದು. ಕೇಂದ್ರ ಸರ್ಕಾರ 2000 ಕೋಟಿ ರೂ. ಬಂಡವಾಳ ಹೂಡಿ ಕಾರ್ಖಾನೆಯನ್ನು ಸರ್ಕಾರದ ಸೌಮ್ಯದಲ್ಲಿಯೇ ನಡೆಸಿಕೊಂಡು ಹೋಗಬೇಕೆಂದು ಸಭೆ ಒತ್ತಾಯಿಸಿದೆ.
ಸಮಿತಿ ವಿವರ ಹೀಗಿದೆ:

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















