ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಯಾವುದೇ ರೀತಿಯ ದಾಖಲೆ ಹಾಗೂ ಕಾರಣವಿಲ್ಲದೇ ಹಸುವಿನ ಮೂರು ಕರುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಕೃತ್ಯವನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿ, ಪೊಲೀಸರ ಮೂಲಕ ಗೋಶಾಲೆಗೆ ಸೇರಿಸಿದ್ದಾರೆ.
ನಗರದ ಕಡದಕಟ್ಟೆ ಬಳಿಯಲ್ಲಿ ಸರಕು ಸಾಗಾಣಿಕೆ ವಾಹನದಲ್ಲಿ ಕರುಗಳನ್ನು ಸಾಗಿಸಲಾಗುತ್ತಿದೆ ಎಂಬ ಸ್ಥಳೀಯರು ಬಜರಂಗ ದಳದ ಜಿಲ್ಲಾ ಸಂಚಾಲಕ ಸುನಿಲ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ತತಕ್ಷಣವೇ ಕಾರ್ಯಪ್ರವೃತ್ತರಾದ ಇವರು, ತಾಲೂಕು ಸಂಚಾಲಕ ವಡಿವೇಲು ಅವರಿಗೆ ಈ ವಿಚಾರವನ್ನು ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಅವರು ವಾಹನ ಚಾಲಕರ ಬಳಿ ವಿಚಾರಿಸಿದ್ದಾರೆ. ಆದರೆ, ಕರುಗಳನ್ನು ಸಾಗಿಸಲು ಯಾವುದೇ ಕಾರಣ ಹಾಗೂ ಅಧಿಕೃತ ದಾಖಲೆ ಅವರ ಬಳಿ ಇರಲಿಲ್ಲ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ನ್ಯೂಟೌನ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಂತರ ಆನಂತರ ಕರುಗಳನ್ನು ವಶಕ್ಕೆ ಪಡೆದು ಗೋಶಾಲೆಗೆ ಕಳುಹಿಸಿದ್ದಾರೆ.
ಈ ವೇಳೆ ಬಜರಂಗದಳದ ನಗರ ಗೋ ಪ್ರಮುಖರಾದ ಶ್ರೀಕಾಂತ್, ಮತ್ತು ನಗರ ಸಹ ಸಂಚಾಲಕ ಕಿರಣ್, ಕಾರ್ತಿಕ್ ಕೆದ್ಲಾಯ್ ಮತ್ತು ಎಂಸಿ ಹಳ್ಳಿ ಬಜರಂಗದಳದ ಪ್ರಮುಖರಾದ ಸಂಜು ಇದ್ದರು.
ಬಜರಂಗದಳ ಕಾರ್ಯಕರ್ತರ ಈ ಒಂದು ಕಾರ್ಯಕ್ಕೆ ನಾಗರಿಕರು, ವಿಶ್ವ ಹಿಂದೂ ಪರಿಷತ್, ಬಜರಂಗದಳ ಭದ್ರಾವತಿಯ ಪ್ರಮುಖರು ಮತ್ತು ಎಲ್ಲಾ ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post