ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೃಷಿ ಮಸೂದೆ ಕುರಿತಾಗಿ ಕಾಂಗ್ರೆಸ್ ಹೇಳುತ್ತಿರುವ ಸುಳ್ಳು ಮಾಹಿತಿಗೆ ರೈತರು ಬಲಿಯಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದ್ದಾರೆ.
ಸಂಸದರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೃಷಿ ನೂತನ ಮಸೂದೆ ಕೇಂದ್ರ ಸರ್ಕಾರ ತಂದಾಗ ದೇಶದ ರೈತರ ಸಂತಸ ಪಟ್ಟಿದ್ದರು. ಆದರೆ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷದವರು ಹಾಗೂ ನಕಲಿ ರೈತರು ವಿರೋಧ ಮಾಡಿದ್ದರು. ಈ ಸತ್ಯವನ್ನು ರೈತರು ಅರಿಯಬೇಕು. ಕಾಂಗ್ರೆಸ್ ಎಂದಿಗೂ ಮತ್ತೆ ಮತ್ತೆ ಸುಳ್ಳನ್ನೇ ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಕ್ಷಣಾ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ ಬಗ್ಗೆಯೂ ಕಾಂಗ್ರೆಸ್ ಹೀಗೇ ಸುಳ್ಳು ಹೇಳಿತ್ತು. ರಫೇಲ್ ಒಪ್ಪಂದವನ್ನು ಹಗರಣ ಎಂದು ಬಿಂಬಿಸಲಾಯಿರು. ಆದರೆ ಸತ್ಯ ಏನೆಂದು ನ್ಯಾಯಾಲಯವೇ ಹೇಳಿದೆ ಎಂದರು.
ಕಾಂಗ್ರೆಸ್ ಪಕ್ಷ ಸತ್ಯವನ್ನು ಮುಚ್ಚಿಟ್ಟು ಸುಳ್ಳನ್ನೇ ಸಾವಿರ ಸಲ ಹೇಳುತ್ತದೆ. ಕಾಂಗ್ರೆಸ್ ಸುಳ್ಳನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾಗಬಾರದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ರೈತರ ಹಾಗೂ ದೇಶದ ಜನರೊಂದಿಗೆ ಇದ್ದಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















