ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ನಡೆದಿದ್ದ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದು ಫಲಿತಾಂಶ ಹೊರಬಂದಿತ್ತು, ಆದರೆ, ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನ್ಯಾಯಾಲಯದಿಂದ ಆಯ್ಕೆ ಪ್ರಕ್ರಿಯೆಗೆ ತಡೆಯಾಜ್ಞೆ ಒಡ್ಡಲಾಗಿತ್ತು. ಆದರೀಗ ನ್ಯಾಯಾಲಯದ ತೀರ್ಪು ತೆರವಾದ ಕಾರಣದಿಂದ ಆಯ್ಕೆ ಪ್ರಕ್ರಿಯೆ ಪುನರಾರಂಭಕ್ಕೆ ಚಾಲನೆ ಸಿಕ್ಕಂತಾಗಿದೆ.
ರಾಜ್ಯ ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ 9 ನೆಯ ಅವಧಿಗೆ ಮೀಸಲಾತಿ ನಿಗದಿ ಪಡಿಸಿ ದಿನಾಂಕ 8/10/2020 ರಂದು ಅಧಿಸೂಚನೆ ಹೊರಡಿಸಿದೆ.
ಈ ಅಧಿಸೂಚನೆ ಪ್ರಕಾರ ಶಿಕಾರಿಪುರ ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನವು ಬಿಸಿಎಂ ಎ ಮಹಿಳೆಗೆ ಲಭ್ಯವಾಗಲಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಎಂದು ಘೋಷಿಸಿಸಲಾಗಿದೆ.
ಶಿಕಾರಿಪುರದಲ್ಲಿ ಚುನಾವಣೆ ನಡೆದ ಬಳಿಕ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಬಹಳಷ್ಟು ಪೈಪೋಟಿ ನಡೆಸಲಾಯಿತು. ಈ ಬಾರಿಯೂ ಶಿಕಾರಿಪುರದಲ್ಲಿ ಪುರಸಭೆಗೆ ಅಧ್ಯಕ್ಷಿಣಿಯಾಗಿ ಬಿಸಿಎಂ ಎ ಮಹಿಳೆಗೆ ಲಭಿಸಲಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಎಂಬುದಾಗಿರುವುದರಿಂದ ಇವೆರಡೂ ಸ್ಥಾನಗಳಿಗೆ ಹೆಚ್ಚಿನ ಒತ್ತಡದ ಜಿದ್ದಾಜಿದ್ದಿ ನಡೆಯಲಿದ್ದು, ಅಧ್ಯಕ್ಷ ಉಪಾಧ್ಯಕ್ಷರಾಗಿ ಯಾರಾಗುತ್ತಾರೆ ಎಂದು ಕಾದು ನೋಡುವ ಸ್ಥಿತಿ ಪಟ್ಟಣದ ಜನತೆ ಕಾತರದಿಂದ ಕಾದು ನೋಡಬೇಕಾಗಿದೆ.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post