ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ರಾಜ್ಯ, ಕೇಂದ್ರದ ಯೋಜನೆ ಜನರಿಗೆ ತಲುಪಿಸುವುದಕ್ಕೆ ಪೋಷಣ್ ಅಭಿಯಾನ್ ಉತ್ತಮ ಯೋಜನೆ ಆಗಿದ್ದು ಅಂಗನವಾಡಿ ಶಿಕ್ಷಕಿಯರು ತಮಗೆ ನೀಡಿರುವ ಸ್ಮಾರ್ಟ್ ಫೋನ್ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಪೋಷಣ್ ಅಭಿಯಾನ ಯೋಜನೆ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು.
ಸಲ್ಲಿಸುತ್ತೇನೆ. ತಾಲೂಕಿನಲ್ಲಿ 302 ಅಂಗನವಾಡಿಗಳಿದ್ದು ಎಲ್ಲಕಡೆ ಮೂಲಸೌಕರ‌್ಯ ಕಲ್ಪಿಸುವುದಕ್ಕೆ ಅದ್ಯತೆ ನೀಡಲಾಗಿದೆ. ಎಲ್ಲಿಯಾದರೂ ತೊಂದರೆ ಆಗಿದ್ದರೆ ತಮಗೆ ತಿಳಿಸಿದಲ್ಲಿ ಆದ್ಯತೆ ಮೇರೆಗೆ ಉತ್ತಮ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿ ನಂದಕುಮಾರ್ ಮಾತನಾಡಿ, ತಾಲೂಕಿನಲ್ಲಿ 302 ಅಂಗನವಾಡಿ ಕೇಂದ್ರಗಳಿದ್ದು ಮೇಲ್ವಿಚಾರಕಿಯರು ಸೇರಿ 312ಸ್ಮಾರ್ಟ್ ಫೋನ್ ವಿತರಣೆ ಮಾಡಲಾಗುತ್ತಿದೆ. ತಾಲೂಕಿನ ಎಲ್ಲ ವಿಭಾಗದ ಶಿಕ್ಷಕಿಯರಿಗೆ ತರಬೇತಿ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಫೋನ್‌ಗೆ ಸಾಪ್ಟ್‌ವೇರ್ ಅಳವಡಿಕೆ, ಇನ್ನಷ್ಟು ತರಬೇತಿ ನಂತರ ಮುಂದಿನ ದಿನಗಳಲ್ಲಿ ಇಲಾಖೆ ಯೋಜನೆ ಸಂಪೂರ್ಣ ಗಣಕೀಕರಣಗೊಳ್ಳಲಿದೆ ಅದು ಜನರಿಗೆ ಅನುಕೂಲ ಆಗುತ್ತದೆ ಯೋಜನೆ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ತಾ.ಪಂ. ಅಧ್ಯಕ್ಷ ಪ್ರಕಾಶ್ ಉಡುಗಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಚನ್ನಳ್ಳಿ, ಸದಸ್ಯರಾದ ಸುರೇಶ್‌ನಾಯ್ಕ, ಮಲ್ಲಿಕ್‌ರೆಡ್ಡಿ, ಗೀತಾ ರಾಜಣ್ಣ, ಕವಲಿ ಸುಬ್ರಹ್ಮಣ್ಯ, ಗಾಯಿತ್ರಿ, ಈಸೂರು ಜಯಣ್ಣ, ಇಒ ಪರಮೇಶ್, ಜಿ.ಪಂ.ಸದಸ್ಯರಾದ ಅರುಂಧತಿ ರಾಜೇಶ್, ರೇಣುಕಾ ಹನುಮಂತಪ್ಪ, ಇಲಾಖೆ ಅಧಿಕಾರಿಗಳಾದ ರತ್ನಮ್ಮ, ಸುನೀತಾ ಮುಡೇರಾ, ಎಲ್ಲ ಅಂಗನವಾಡಿ ಕಾರ‌್ಯಕರ್ತೆಯರು ಇದ್ದರು.

ಶಿಕಾರಿಪುರ ತಾಲೂಕಿನಲ್ಲಿ ಕೃಷಿ ಇಲಾಖೆ ಹಾಗೂ ಬೆಂಗಳೂರಿನ ಸಾವಯುವ ಕೃಷಿ ಪ್ರಮಾಣದ ಸಂಘದ ಆಶ್ರಯದಲ್ಲಿ ಸಾವಯವ ಕೃಷಿ ಪ್ರಮಾಣೀಕರಣ ಯೋಜನೆ ಹಾಗೂ ಆತ್ಮ ಯೋಜನೆ ಅಡಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಸಾವಯುವ ಕೃಷಿ ತಾಂತ್ರಿಕತೆಗಳ ಬಗ್ಗೆ ಮಾಹಿತಿಗಳನ್ನು ನೀಡಲಾಯಿತು ಮತ್ತು ರೈತರಿಗೆ ಕೃಷಿ ಉಪಕರಣಗಳನ್ನು ವಿತರಿಸಲಾಯಿತು.

(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news






Discussion about this post