ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ತಾಲೂಕಿನ ಪ್ರಸಿದ್ಧ ಗುಡವಿ ಪಕ್ಷಿಧಾಮಕ್ಕೆ ನ.13ರಂದು ಪಕ್ಷಿ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಈ ಕುರಿತಂತೆ ಮಾಹಿತಿ ನೀಡಿದ ಪರಿಸರ ಜಾಗೃತಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸಿ.ಪಿ. ಈರೇಶಗೌಡ, ಅಂದು ಈ ತಂಡದವರೊಂದಿಗೆ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತಹೆಗಡೆ ಅಶಿಸರ, ಶಾಸಕ ಕುಮಾರಬಂಗಾರಪ್ಪ, ಜೀವವೈವಿಧ್ಯ ಸಮಿತಿ ಸದಸ್ಯರಾದ ಕೆ. ವೆಂಕಟೇಶ್, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಪಾಟೀಲ್, ವನ್ಯಜೀವಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಪರಿಸರ ಕಾರ್ಯಕರ್ತರು, ಗ್ರಾಮ ಪ್ರಮುಖರು ಪಕ್ಷಿಧಾಮದ ಪ್ರಗತಿ ಕುರಿತು ಸಮಾಲೋಚನೆ ನಡೆಸುತ್ತಾರೆ ಎಂದಿದ್ದಾರೆ.
ಈ ವೇಳೆ ಪರಿಸರ ಜಾಗೃತಿ ಟ್ರಸ್ಟ್, ವೃಕ್ಷಲಕ್ಷ ಆಂದೋಲನ, ಹಸಿರು ಮಡಿಲು ಹಾಗೂ ರಾಜ್ಯ ಜೀವವೈವಿಧ್ಯ ಮಂಡಳಿ, ಇಲಾಖೆಗಳ ಅಧಿಕಾರಿಗಳು ಹಾಜರಿರಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post