ಕಲ್ಪ ಮೀಡಿಯಾ ಹೌಸ್ | ರಿಪ್ಪನ್’ಪೇಟೆ |
ಇಲ್ಲಿನ ಸಾಗರ #Sagar ರಸ್ತೆಯ ಎಪಿಎಂಸಿ ಮುಂಭಾಗದಲ್ಲಿ ಸಮರ್ಪಕವಾದ ಸೂಚನ ಫಲಕವಿಲ್ಲದ ಕಾರಣ ಡಿವೈಡರ್’ಗೆ ಕಾರು ಡಿಕ್ಕಿಯಾಗಿ ಓರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಟಾಟಾ ಇಂಡಿಕಾ ಕಾರಿನಲ್ಲಿ ಇಬ್ಬರು ಸಣ್ಣ ಮಕ್ಕಳು ಸೇರಿದಂತೆ ಕೋಣಂದೂರು ಮೂಲದ ಐವರು ಪ್ರಯಾಣಿಸುತ್ತಿದ್ದರು. ದೇವದಾಸ್ ಎಂಬುವವರಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ಪತ್ನಿ ಸವಿತಾ ಅವರ ಕಾಲು ಮುರಿತವಾಗಿದೆ. ಮಗಳು ಕೀರ್ತಿ ಎಂಬುವವರಿಗೂ ತಲೆಗೆ ಪೆಟ್ಟಾಗಿದೆ.

ಅವೈಜ್ಞಾನಿಕ ಡಿವೈಡರ್
ಸಾಗರ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಎಪಿಎಂಸಿ ಮುಂಭಾಗದಲ್ಲಿ ಡಿವೈಡರ್ ನಿರ್ಮಾಣ ಮಾಡಲಾಗಿದೆ. ಆದರೆ ಡಿವೈಡರ್’ಗೆ ಯಾವುದೇ ಸೂಚನ ಫಲಕವಿಲ್ಲದ ಕಾರಣ ರಾತ್ರಿ ಸಮಯದಲ್ಲಿ ಅಪಘಾತ ನಡೆಯುತ್ತಿದ್ದು, ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರನಿಗೆ ತಿಳಿಸಿದ್ದರು. ಆದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಲಾಗುತ್ತಿದೆ.
ಒಟ್ಟಾರೆಯಾಗಿ ವಾಹನ ಚಾಲಕರಿಗೆ ರಾತ್ರಿ ಸಮಯದಲ್ಲಿ ಡಿವೈಡರ್ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ಅಪಘಾತ ನಡೆಯುತ್ತಿದ್ದು ಕೂಡಲೇ ಈ ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸಿ ಮುಂದಾಗುವ ಅನಾಹುತ ಭಾರಿ ಅನಾಹುತಗಳನ್ನು ತಡೆಯಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post