ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಶಾಸಕ ಹೆಚ್. ಹಾಲಪ್ಪ ಅವರು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನೆಡೆಸಿ, ಶಿಗ್ಗಲು-ಕೋಗಾರು ಮಧ್ಯದ ಶರಾವತಿ ಹಿನ್ನೀರಿನ ಎಣ್ಣೆಹೊಳೆಗೆ ನೂತನ ಲಾಂಚ್ ಸಂಪರ್ಕ ಕಲ್ಪಿಸಲಾಗಿದ್ದು. ಸದರಿ ಲಾಂಚ್ ನಿರ್ವಹಣೆಗೆ ನುರಿತ ಚಾಲಕರನ್ನು ನಿಯುಕ್ತಿಗೊಳಿಸುವಂತೆ ಬಂದರು ಇಲಾಖೆ (ಕಾರವಾರ) ನಿರ್ದೇಶಕ ಕ್ಯಾಪ್ಟನ್ ಸ್ವಾಮಿಯವರಿಗೆ ಸೂಚಿಸಿದರು.
ಫೆ.27ರಂದು ಈ ನೂತನ ಲಾಂಚ್ ಸೇವೆಯನ್ನು ಉದ್ಘಾಟಿಸಿ, ನಂತರ ಸಾರ್ವಜನಿಕ ಸಂಚಾರಕ್ಕೆ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ನಂತರ ನಿರ್ಮಿತಿ ಇಲಾಖೆ ಅಭಿಯಂತರರ ಜೊತೆ ಸಭೆ ನೆಡೆಸಿ, ವಿಳಂಬವಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳಲು, ಗುತ್ತಿಗೆದಾರರಿಗೆ ಕಟ್ಟು ನಿಟ್ಟಿನ ಆದೇಶ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post