ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿದ್ಧರಾಮಯ್ಯ ಅವರದ್ದು ಜಿನ್ನಾ ಸಂತತಿಯಾಗಿದ್ದು, ಕನಕದಾಸರ ರಕ್ತ ಅವರಲ್ಲಿ ಇಲ್ಲ ಎಂದು ಮಾಜಿ ಸಚಿವ, ಶಾಸಕ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲೆಲ್ಲಾ ಕನಕದಾಸರು, ಸಂಗೊಳ್ಳಿರಾಯಣ್ಣರ ರಕ್ತ ಹರಿಯುತ್ತಿದೆ. ಆದರೆ, ಸಿದ್ಧರಾಮಯ್ಯರದ್ದು ಜಿನ್ನಾ ಸಂತತಿಯಾಗಿದೆ. ಹೀಗಾಗಿ, ಆರ್’ಎಸ್’ಎಸ್ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಸಿದ್ದರಾಮಯ್ಯ ಸೋನಿಯಾಗಾಂಧಿ ಸೆರಗು ಸೆರಗು ಹಿಡಿದು ಹೋಗಿದ್ದಾರೆ. ಆ ಸೋನಿಯಾಗಾಂಧಿ ಅತ್ತೆ ಇಂದಿರಾಗಾಂಧಿ ಮಾತ್ರವಲ್ಲ ನೆಹರೂ ಅವರುಗಳು ಎಷ್ಟೇ ಪ್ರಯತ್ನ ಪಟ್ಟರೂ ಆರ್’ಎಸ್’ಎಸ್’ನ ಒಂದು ಕೂದಲು ಸಹ ಅಲುಗಾಡಿಸಲು ಸಾಧ್ಯವಾಗಿಲ್ಲ.
Also read: ಕೊಪ್ಪಳ ಪಿಎಫ್’ಐ ಜಿಲ್ಲಾಧ್ಯಕ್ಷನದ್ದು 5-6 ಬ್ಯಾಂಕ್ ಅಕೌಂಟ್: ಲಕ್ಷಾಂತರ ಹಣ ವರ್ಗಾವಣೆ
ಪಿಎಫ್`ಐಗಾಗಿ ಸಿದ್ದರಾಮಯ್ಯ ಆರ್’ಎಸ್’ಎಸ್ ವಿರುದ್ಧ ಮಾತನಾಡುತ್ತಾರೆ. ಕಾಂಗ್ರೆಸ್’ನ ಒಂದು ಹುಳುವಿನಿಂದಲೂ ಸಹ ಸಂಘ ಪರಿವಾರವನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post