ಕಲ್ಪ ಮೀಡಿಯಾ ಹೌಸ್ | ಮಹಿಷಿ (ತೀರ್ಥಹಳ್ಳಿ) |
ಭಾರತೀಯ ಮೂಲದ ವೇದ ಮತ್ತು ಶಾಸ್ತ್ರವಿದ್ಯೆಗಳಿಗೆ ಸರ್ವ ದೇಶ-ಕಾಲದಲ್ಲೂ ಮಾನ್ಯತೆ ಇದೆ. ಹಾಗಾಗಿ ಇಂಥ ವಿದ್ಯೆಗಳಿಗೆ ಸದಾ ಗೌರವಾದರ ತೋರಿ ಯುವ ವಿದ್ವಾಂಸರಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ #SriSatyatmaThirthaSwamiji ಹೇಳಿದರು.
ಮಹಿಷಿ #Mahishi ಕ್ಷೇತ್ರದಲ್ಲಿ ಶ್ರೀ ಸತ್ಯಸಂಥ ತೀರ್ಥರ 229ನೇ ಆರಾಧನಾ ಮಹೋತ್ಸವದ ವಿಶೇಷ ಸಂದರ್ಭದಲ್ಲಿ ಯುವ ವಿದ್ವಾಂಸ ವಿದ್ಯಾರ್ಣವ ಬಾಳಗಾರು ನೀಡಿದ `ನ್ಯಾಯಾಮೃತ ಪರೀಕ್ಷೆ’ #Nyayamruta ನಂತರ ಆಶೀರ್ವಚನ ನೀಡಿದರು.

ಯುವ ವಿದ್ವಾಂಸ ವಿದ್ಯಾರ್ಣವ ಬಾಳಗಾರು #Balagaru ಅವರು ಶ್ರೀ ವ್ಯಾಸತೀರ್ಥ ವಿರಚಿತ `ನ್ಯಾಯಾಮೃತ ಪರೀಕ್ಷೆ’ ನೀಡಿ ಹತ್ತಾರು ಪಂಡಿತ, ವಿದ್ವಾಂಸರಿಂದ ಇಂದು ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅವರ ತಂದೆ ಬಾಳಗಾರು ರುಚಿರಾಚಾರ್ಯರು ಮಗನಿಗೆ ಶಾಸ್ತ್ರಪಾಠ ಹೇಳಿ ನಮ್ಮ ಶಾಸ್ತ್ರ ವಿದ್ಯಾಪರಂಪರೆಯನ್ನು ಮುಂದುವರಿಸಿದ್ದಾರೆ. ಇದು ಶ್ಲಾಘನೀಯ. ಕಲಿಕೆ ಇಲ್ಲಿಗೇ ನಿಲ್ಲದೇ ಮುಂಬರುವ ದಿನಗಳಲ್ಲಿ ತರ್ಕತಾಂಡವ, ಚಂದ್ರಿಕಾ ಮುಂತಾದ ಗ್ರಂಥಗಳ ಪರೀಕ್ಷೆಯನ್ನು ಈ ವಿದ್ಯಾರ್ಥಿ ತಜ್ಞರ ಸಮ್ಮುಖ ನೀಡುವಂತಾಗಲಿ ಎಂದು ಶ್ರೀಗಳು ಆಶಿಸಿದರು.

ಗುರುಗಳ ಪರಮಾನುಗ್ರಹದಿಂದ ಇಂದು ನಾನು ಒಂದು ಚಿಕ್ಕ ಹಂತದ ಸಾಧನೆ ಮಾಡಲು ಸಹಕಾರಿಯಾಗಿದೆ. ಇನ್ನೂ ಅನೇಕ ಗ್ರಂಥಗಳ ಅಧ್ಯಯನ ಮಾಡುವ ಗುರಿ ಇದೆ. `ನ್ಯಾಯಾಮೃತ ವಿಶಾರದ’ ಎಂಬ ಬಿರುದು ಇಂದು ನನಗೆ ದೊರೆತಿದೆ ಎಂದರೆ ಅದಕ್ಕೆ ನಮ್ಮ ತಂದೆ ವಿದ್ವಾನ್ ರುಚಿರಾಚಾರ್ಯರೇ ಕಾರಣ.
| ಬಾಳಗಾರು ವಿದ್ಯಾರ್ಣವ
ಯುವ ವಿದ್ವಾಂಸ
ಯುವ ವಿದ್ವಾಂಸ ವಿದ್ಯಾರ್ಣವ ಬಾಳಗಾರು ಅವರಿಗೆ ಹತ್ತಾರು ವಿದ್ವಾಂಸರ ಸಮ್ಮುಖ `ನ್ಯಾಯಾಮೃತ ವಿಶಾರದ’ #NyayamrutaVisharada ಎಂಬ ಬಿರುದು, ಸನ್ಮಾನಪತ್ರ, ಶ್ರೀ ಮಧ್ವ ಸಿದ್ಧಾಂತ ಅಭಿವೃದ್ಧಿ ಕಾರ್ಯಕಾರಿಣಿ ಸಭಾದಿಂದ 1 ಲಕ್ಷ ರೂ. ನಗದು ಬಹುಮಾನ, ಬೆಳ್ಳಿ ಕಡಗ ನೀಡಿ ಗೌರವಿಸಿದರು.

ನಾವು ಇದೇ ಮಹಿಷಿ ಸನಿಹದ ಬಾಳಗಾರು ಮೂಲದವರು. ಕಾರ್ಯನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದೇವಾದರೂ ಮಹಿಷಿ ಶ್ರೀ ಸತ್ಯಸಂಧರ ಅನುಗ್ರಹಬಲದಿಂದಲೇ ಒಂದಷ್ಟು ಶಾಸ್ತ್ರ ವಿದ್ಯೆ ಸಂಪಾದಿಸಿದ್ದೇವೆ. ನನ್ನ ಪುತ್ರ ಇಂದು ಕಲಿತ ಎರಡು ಅಕ್ಷರಗಳನ್ನು ಇಲ್ಲೇ ಸಮರ್ಪಣೆ ಮಾಡುವ ಯೋಗ ದೊರಕಿರುವುದು ನಮ್ಮ ಭಾಗ್ಯ.
| ಬಾಳಗಾರು ರುಚಿರಾಚಾರ್ಯ
ಹಿರಿಯ ವಿದ್ವಾಂಸ
ಶ್ರೀ ಉತ್ತರಾದಿಮಠ ಮಹಿಷಿ ಶಾಖೆಯ ವ್ಯವಸ್ಥಾಪಕರಾದ ಶ್ರೀ ಸತ್ಯಪ್ರಜ್ಞಾಚಾರ್ಯ ಮತ್ತು ಶ್ರೀ ಸತ್ಯಾಭಿಜ್ಞಾಚಾರ್ಯರ ನೇತೃತ್ವದಲ್ಲಿ ಶ್ರೀ ಸತ್ಯಸಂಧ ತೀರ್ಥರ ದ್ವಿತೀಯ ಆರಾಧನೆ ಸಂಪನ್ನಗೊಂಡಿತು. ಶ್ರೀ ಸತ್ಯಾತ್ಮತೀರ್ಥರು ಮತ್ತು ಕೂಡಲಿ ಶ್ರೀ ರಘುವಿಜಯ ತೀರ್ಥರು ಸಾನ್ನಿಧ್ಯ ವಹಿಸಿದ್ದರು. ವಿದ್ವಾಂಸರಾದ ರುಚಿರಾಚಾರ್ಯ, ಧೀರೇಂದ್ರಾಚಾರ್ಯ ಇತರರು ಇದ್ದರು.









Discussion about this post