ಶಿವಮೊಗ್ಗ: ಜಿಲ್ಲಾ ಪಂಚಾಯತ್‌ನಲ್ಲಿ ಆಡಳಿತರೂಢ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದ ಕಾರಣ ಸ್ಥಾಯಿ ಸಮಿತಿ ಸದಸ್ಯರನ್ನು ಚುನಾವಣೆ ಮೂಲಕ ನೇಮಕ ಮಾಡುವಂತೆ ಹಾಗೂ ಈ ಕೂಡಲೇ ವಿ-ನಿಯಮಾವಳಿಯನ್ನು ಜಾರಿಗೊಳಿಸಲು ವಿಷೇಶ ಸಭೆ ಕರೆಯುವಂತೆ ಒತ್ತಾಯಿಸಿ ಇಂದು ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯರು ಇಂದು ಮೌನ ಪ್ರತಿಭಟನೆ ನಡೆಸಿದರು.
ಜಿಪಂ ಕಚೇರಿಯ ಸಿಇಒ ಕಛೇರಿಯ ಕೆಳಭಾಗದಲ್ಲಿ ಧರಣಿ ಕುಳಿತ ಬಿಜೆಪಿಯ ಜಿಪಂ ಸದಸ್ಯರು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯು ಈಗಾಗಲೇ 3 ಬಾರಿ ಕೋರಂ ಇಲ್ಲದೆ ಮುಂದೂಡಲಾಗಿದೆ. ಇದರಿಂದಾಗಿ ಜಿಪಂ ಅಧ್ಯಕ್ಷರಿಗೆ ಸ್ಥಾಯಿ ಸಮಿತಿ ರಚಿಸಲು ಯಾವುದೇ ಸ್ಪಷ್ಟ ಬಹುಮತವಿಲ್ಲದ್ದು ಕಂಡು ಬಂದಿದೆ ಎಂದರು.
ಹಾಗಾಗಿ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಕಲಂ 186 ರಂತೆ ಸ್ಥಾಯಿ ಸಮಿತಿ ಸದಸ್ಯರನ್ನ ನೇಮಕ ಮಾಡಲು ಚುನಾವಣೆ ನಡೆಸುವಂತೆ ಸಭೆ ನಡೆಸಲು ಬಿಜೆಪಿ ಸದಸ್ಯರು ಸಿಇಒ ಶಿವಲಿಂಗ ಕೆ. ಗೌಡ ಅವರಿಗೆ ಮನವಿಯನ್ನು ಸಲ್ಲಿಸಿದರು.
ಸದಸ್ಯರ ಮನ ಒಲಿಸಲು ಜಿಪಂನ ಸಿಇಒ ಶಿವಲಂಗೇ ಕೆ. ಗೌಡ ಧರಣಿ ಕೈ ಬಿಡುವಂತೆ ಮನ ಒಲಿಸಲು ಹರಸಹಾಸ ಮಾಡಿದರು. ಲೋಕಸಭಾ ಚುನಾವಣೆ ಜಿಲ್ಲೆಯಲ್ಲಿರುವುದರಿಂದ ಚುನಾವಣೆ ನಡೆದ ನಂತರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಿಇಒ ಭರವಸೆ ನೀಡಿದರು. ಇದರಿಂದ ಬಿಜೆಪಿ ಸದಸ್ಯರು ಪ್ರತಿಭಟನೆ ಅಂತಿಮಗೊಳಿಸಿದರು.
ಧರಣಿಯಲ್ಲಿ ಜಿಪಂನ ಬಿಜೆಪಿ ಸದಸ್ಯರಾದ ಕೆ.ಇ. ಕಾಂತೇಶ್, ಸುರೇಶ್ ಸ್ವಾಮಿ ರಾವ್, ಸುರೇಶ್, ಸೌಮ್ಯ, ಅರುಂಧತಿ, ಗಾಯಿತ್ರಿ ಶಿವನಂದಯ್ಯ ಇದ್ದರು.
Discussion about this post