ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕ್ರಿಯಾಶೀಲ ಮಾತ್ರವಲ್ಲ ಅಭಿವೃದ್ಧಿಯ ಹರಿಕಾರರೆಂದೇ ಜನಜನಿತರಾಗಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ಮಾನವೀಯತೆ ಹಾಗೂ ಸರಳತೆ ಮತ್ತೊಮ್ಮೆ ಅನಾವರಣಗೊಂಡಿದೆ.
ಜಿಲ್ಲೆಯ ಮಟ್ಟಿಗೆ ಕೊರೋನಾ ಪಾಸಿಟಿವ್ ಪ್ರಕರಣ ಒಂದೂ ಸಹ ಈವರೆಗೂ ಪತ್ತೆಯಾಗಿಲ್ಲ ಎಂಬ ಸಂತಸದ ವಿಚಾರದೊಂದಿಗೇ, ಎಲ್ಲೆಡೆಯಂತೆ ಜಿಲ್ಲೆಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಎಲ್ಲ ರೀತಿಯ ಮುಂಜಾಗ್ರತೆ ವಹಿಸಲಾಗುತ್ತಿದೆ.
ಇಂತಹ ಕ್ಲಿಷ್ಟ ಸಂದರ್ಭದಲ್ಲಿ ತಮ್ಮ ಕುಟುಂಬಗಳಿಂದ ದೂರ ಉಳಿದು, ತಮ್ಮ ಆರೋಗ್ಯ ಹಾಗೂ ಜೀವವನ್ನೂ ಲೆಕ್ಕಿಸದೇ ಪೊಲೀಸ್ ಸಿಬ್ಬಂದಿಗಳು, ವೈದ್ಯಕೀಯ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.
ಶಿಕಾರಿಪುರದಲ್ಲಿ ಇಂತಹ ಸೇವೆಯಲ್ಲಿ ತೊಡಗಿಕೊಂಡಿರುವ ಕೊರೋನಾ ವಾರಿಯರ್ಸ್‌ಗಳಿಗಾಗಿ ಸಂಸದ ಬಿ.ವೈ. ರಾಘವೇಂದ್ರ ಅವರು ತಮ್ಮ ಕುಟುಂಬದ ವತಿಯಿಂದ ಪ್ರತಿನಿತ್ಯ ಊಟದ ವ್ಯವಸ್ಥೆ ಮಾಡಿದ್ದಾರೆ.
ಶಿಕಾರಿಪುರದಲ್ಲಿ ಇದಕ್ಕೆ ಇಂದು ಚಾಲನೆ ನೀಡಿದ ಸಂಸದ ರಾಘವೇಂದ್ರ ಹಾಗೂ ಅವರ ಪತ್ನಿ ಶ್ರೀಮತಿ ತೇಜಸ್ವಿನಿ ಅವರು, ಪ್ರತಿಯೊಬ್ಬರಿಗೂ ತಾವೇ ಖುದ್ದು ಊಟ ಬಡಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಸಂಸದರು, ನಮಗಾಗಿ, ಸಮಾಜಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಇವರಿಗೆಲ್ಲ ನಮ್ಮ ಕುಟುಂಬದ ವತಿಯಿಂದ ನಾವು ಸಲ್ಲಿಸುತ್ತಿರುವ ಪ್ರೀತಿಯ ಸತ್ಕಾರ ಹಾಗೂ ಸಹಕಾರ ಇದು ಎಂದರು.
ಕೊರೋನ ವಾರಿಯರ್ಸ್‌ಗಳ ಬೆಂಬಲಕ್ಕೆ ನಾವು ಅವರೊಂದಿಗೆ ಕೈ ಜೋಡಿಸಿದ್ದೇವೆ. ನೀವೂ ಸಹಕರಿಸಿ, ಕೊರೋನ ಹೊಡೆದೋಡಿಸೋಣ ಎಂದು ಕರೆ ನೀಡಿದರು.
Get in Touch With Us info@kalpa.news Whatsapp: 9481252093
Discussion about this post