ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಹೊಳೆಹೊನ್ನೂರು ಸೇರಿದಂತೆ ತಾಲೂಕಿನಾದ್ಯಂತ ಇಂದು ಒಟ್ಟು 59 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 2
ವೇಲೂರ್ ಶೆಡ್’ನಲ್ಲಿ ಪುರುಷ, ಜನ್ನಾಪುರದಲ್ಲಿ ಪುರುಷ, ಕೆ.ಸಿ. ಬ್ಲಾಕ್ನಲ್ಲಿ ಪುರುಷ, ಸಂಜಯ್ ಕಾಲೋನಿಯಲ್ಲಿ ಪುರುಷ, ಹುತ್ತಾಕಾಲೋನಿಯಲ್ಲಿ ಪುರುಷ, ಮಿಲಿಟರಿ ಕ್ಯಾಂಪಿನಲ್ಲಿ ಪುರುಷ, ವಾಸವಿ ಕಾಲೋನಿಯಲ್ಲಿ 32 ವರ್ಷದ ಪುರುಷನಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಇನ್ನು, ಕನಕನಗರದ 56 ವರ್ಷದ, 28 ವರ್ಷದ ಮಹಿಳೆ ಸೇರಿದಂತೆ ಮೂವರು ಮಹಿಳೆಯರು, ಸುಣ್ಣದ ಹಳ್ಳಿಯಲ್ಲಿ 28 ವರ್ಷದ ಮಹಿಳೆ, ಭೋವಿ ಕಾಲೋನಿಯ 38 ವರ್ಷದ ಪುರುಷ, ಸಯ್ಯದ್ ಕಾಲೋನಿಯ 24 ವರ್ಷದ ಮಹಿಳೆ, ಹೊಸಮನೆ 46 ವರ್ಷದ, 54 ವರ್ಷದ ಪುರುಷ ಸೇರಿದಂತೆ ಮೂವರು ಪುರುಷರು, ಓರ್ವ ಮಹಿಳೆ, ಅಂಬೇಡ್ಕರ್ ಕಾಲೋನಿಯ 45 ವರ್ಷದ ಪುರುಷ, ನಿರ್ಮಲಾ ಆಸ್ಪತ್ರೆಯ 28 ವರ್ಷದ ಸಿಸ್ಟರ್ ಹಾಗೂ 24 ವರ್ಷದ ಪುರುಷ, ಸಿದ್ಧಾರೂಢನಗರದ 32 ವರ್ಷದ ಮಹಿಳೆ, ಕಾಗದನಗರದ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆ, ಹುಡ್ಕೋ ಕಾಲೋನಿಯ ಓರ್ವ ಪುರುಷ, ವಿದ್ಯಾಮಂದಿರದ ಬಳಿ 66 ವರ್ಷದ ಪುರುಷ, ಜಿಂಕ್ಲೈನ್ನ 40 ವರ್ಷದ ಪುರುಷ ಮತ್ತು 36 ವರ್ಷದ ಮಹಿಳೆ, ಜನ್ನಾಪುರದ 57 ವರ್ಷದ ಮಹಿಳೆ, ಜೇಡಿಕಟ್ಟೆಯ 26 ವರ್ಷದ ಇಬ್ಬರು ಪುರುಷರು, ಕುವೆಂಪು ನಗರದ ಮಹಿಳೆ, ಕಡದಕಟ್ಟೆಯ 60 ವರ್ಷದ ಪುರುಷ, ಅಪ್ಪರ್ ಹುತ್ತಾದ ಓರ್ವಪುರುಷ, ಭೋವಿಕಾಲೋನಿಯ ಪುರುಷ, ಕೋಡಿಹಳ್ಳಿಯ 62 ವರ್ಷದ ಪುರುಷ, 52 ವರ್ಷದ ಮಹಿಳೆ, ಅಮೀರ್ಜಾನ್ ಕಾಲೋನಿಯ 65 ವರ್ಷದ ಮಹಿಳೆ, ಹೊಳೆಹೊಸೂರು ರಸ್ತೆಯ 48 ವರ್ಷದ ಪುರುಷನಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಹೊಳೆಹೊನ್ನೂರಿನ 37, 47, 24 ವರ್ಷದ ಮೂವರು ಪುರುಷರು ಹಾಗೂ 55 ವರ್ಷದ ಮಹಿಳೆ, ಮಾರಶೆಟ್ಟಿಹಳ್ಳಿಯ 9 ವರ್ಷದ ಬಾಲಕಿ, 22, 45 ವರ್ಷದ 38 ವರ್ಷದ ಮೂವರು ಮಹಿಳೆಯರು 35 ವರ್ಷದ ಪುರುಷ ಅರಬಿಳಚಿಯ 46 ವರ್ಷದ ಪುರುಷ, ಕೂಡ್ಲಿಗೆರೆಯ 18 ವರ್ಷದ ಯುವತಿ ಸೇರಿದಂತೆ 54ಕ್ಕೂ ಅಧಿಕ ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ.
Get In Touch With Us info@kalpa.news Whatsapp: 9481252093
Discussion about this post