ನವದೆಹಲಿ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತಕ್ಕೆ ಅಕ್ಷರಶಃ ಹೆದರಿರುವ ಪಾಕಿಸ್ಥಾನ ಸರ್ಕಾರ, ತನ್ನ ಒಡಲಲ್ಲೆ ಇಟ್ಟುಕೊಂಡಿದ್ದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್’ನನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ.
ಈ ಕುರಿತಂತೆ ಭಾರತದ ಕೇಂದ್ರ ಗುಪ್ತಚರ ಇಲಾಖೆ ಕೇಂದ್ರಕ್ಕೆ ವರದಿ ಸಲ್ಲಿಸಿದ್ದು, ಜೈಷ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್’ನನ್ನು, ರಾವಲ್ಫಿಂಡಿಯಿಂದ ಭವಾಲ್ಪುರ ಬಳಿಯಿರುವ ಕೊಟ್ಗಾಣಿ ಸನಿಹದ ಗುಪ್ತಸ್ಥಳಕ್ಕೆ ಶಿಫ್ಟ್ ಮಾಡಿದೆ ಎಂದಿದೆ.
ಮಹತ್ವದ ವಿಚಾರವೆಂದರೆ, ಫೆ.14ರಂದು ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಕಾನ್ವೆ ಮೇಲೆ ಜೈಷ್ ಉಗ್ರರು ದಾಳಿ ನಡೆಸಿದ ಮೂರು ದಿನಗಳ ಒಳಗಾಗಿಯೇ ಅಂದರೆ ಫೆ.17 ಅಥವಾ 18ರಂದೇ ರಾವಲ್ಪಿಂಡಿಯಿಂದ ಸ್ಥಳಾಂತರ ಮಾಡಿದೆ ಎಂದು ಹೇಳಲಾಗಿದೆ.
ಭಾರೀ ಆಶ್ಚರ್ಯಕರ ವಿಚಾರವೆಂದರೆ, ಭಾರತದ ಮೇಲೆ ಉಗ್ರ ದಾಳಿಗಳನ್ನು ನಡೆಸುತ್ತಿರುವ ಮಸೂದ್ ಅಜರ್’ಗೆ ಪಾಕಿಸ್ಥಾನ ಸರ್ಕಾರ ಅತ್ಯಂತ ಹೆಚ್ಚಿನ ಭದ್ರತೆ ನೀಡಿದೆ ಎಂದು ವರದಿಯಾಗಿದೆ. ಅಲ್ಲಿನ ಗುಪ್ತಚರ ಇಲಾಖೆ ಐಎಸ್’ಐ ಹಾಗೂ ಪಾಕ್ ಸೇನೆ ಈ ನೀಚನಿಗೆ ವಿವಿಐಪಿ ಭದ್ರತೆ ನೀಡಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಭಾರತೀಯ ಸೇನೆಯ 42 ಯೋಧರು ವೀರಸ್ವರ್ಗ ಸೇರಿದ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ಸಹ ತನ್ನ ಪಾತ್ರವಿಲ್ಲ ಎಂದು ಪಾಕಿಸ್ಥಾನ ಹೇಳುತ್ತಲೇ ಬರುತ್ತಿದೆ. ಆದರೆ, ಈ ವಿಚಾರದಲ್ಲಿ ಮೇಲ್ನೊಟಕ್ಕೆ ಪಾಕ್ ಪಾತ್ರವಿರುವುದು ಸಾಬೀತಾಗಿದೆ. ಇದರ ನಡುವೆಯೇ ಉಗ್ರರ ಪೋಷಣೆ ಮಾಡುವುದು ಹಾಗೂ ಗಡಿಯಲ್ಲಿ ಉಗ್ರರಿಗೆ ಸಹಕಾರ ನೀಡುವ ಕೃತ್ಯವನ್ನು ನಿಲ್ಲಿಸಬೇಕು ಎಂದು ಭಾರತ ಪಾಕಿಸ್ಥಾನಕ್ಕೆ ತಾಕೀತು ಮಾಡುತ್ತಲೇ ಇದೆ.







Discussion about this post