ನವದೆಹಲಿ: ಮುಂಬರುವ ಬುದ್ಧ ಪೂರ್ಣಿಮೆಯ ದಿನ ದೇಶದ ಹಲವೆಡೆ ಭಯೋತ್ಪಾದಕರು ಭಾರೀ ದಾಳಿ ನಡೆಸುವ ಸಂಚು ರೂಪಿಸಿದ್ದು, ಈ ಕುರಿತಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಈ ಕುರಿತಂತೆ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರ ಹಾಗೂ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದು, ಪ್ರಮುಖ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಬಾಂಗ್ಲಾ ಮೂಲದ ನಟೋರಿಯಸ್ ತರಬೇತಿ ಪಡೆದ ಕ್ರೂರ ಉಗ್ರರು ನೇಪಾಳದ ಮೂಲಕ ಜಮ್ಮು ಕಾಶ್ಮೀರದ ಬಂಡಿಪೋರ್ ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದ್ದು, ಭಾರೀ ದಾಳಿಗೆ ಸಂಚು ರೂಪಿಸಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೇ, ಬಾಂಗ್ಲಾದೇಶ ಮೂಲದ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ ಉಗ್ರ ಸಂಘಟನೆ ದಾಳಿ ಸಂಚು ರೂಪಿಸಿದ್ದು, ಬಾಂಗ್ಲಾದೇಶ, ಭಾರತ ಹಾಗೂ ಮ್ಯಾನ್ಮಾರ್’ಗಳಲ್ಲಿ ಸ್ಫೋಟ ನಡೆಸಲು ಮಹಿಳಾ ಸೂಸೈಡ್ ಬಾಂಬರ್’ಗಳನ್ನು ಸಿದ್ದಪಡಿಸಿದ್ದಾರೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ದೇಶದ ಗಡಿ ಭಾಗ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
















