ಕೋಲ್ಕತ್ತಾ: ದೇಶದಲ್ಲಿ ಯುದ್ಧದ ಕಾರ್ಮೋಡ ಸರಿದು ಕೊಂಚ ತಿಳಿಯಾಗುತ್ತಿರುವ ಬೆನ್ನಲ್ಲೇ, ಕೋಲ್ಕತ್ತಾದಲ್ಲಿ ಬರೋಬ್ಬರಿ 1000 ಕೆಜಿ ಸ್ಫೋಟಕ ಸಾಮಗ್ರಿ ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಚಿತ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಡಿಶಾದಿಂದ ಬರುತ್ತಿದ್ದ ಮೆಟಡೋರನ್ನು ಎಸಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾಹನದಲ್ಲಿ 27 ಚೀಲಗಳಲ್ಲಿ 1000 ಕೆಜಿ ಸ್ಫೋಟಕ ವಸ್ತುಗಳಿದ್ದು, ವಾಹನದ ಚಾಲಕ ಹಾಗೂ ಸಹಾಯಕನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
Discussion about this post