ಅಲೀಘರ್: ಶಸ್ತ್ರಚಿಕಿತ್ಸೆಯ ವೇಳೆ ಬಾಯಿಯ ಒಳಗೆ ಸ್ಫೋಟ ಸಂಭವಿಸಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಕಾರಣ ಆಕೆಯನ್ನು ಇಲ್ಲಿನ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಈ ವೇಳೆ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದು, ವೈದ್ಯರು ಮಹಿಳೆಯ ಬಾಯಿಯ ಒಳಗೆ ಆಮ್ಲಜನಕ ಹೀರುವ ಪೈಪ್ ಹಾಕಿದಾಗ ಬಾಯಿಯ ಒಳಗಿಂದ ಸ್ಪೋಟ ಸಂಭವಿಸಿದೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
#video clip : A 40-year-old Sheela Devi #dies after #explosion in her #mouth during treatment at #MedicalCollege. @aligarhpolice @RMLDelhi @AIIMSRDA @pra0902 pic.twitter.com/nIPG9heKYG
— Anuja Jaiswal (@anujajTOI) May 16, 2019
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳಿಗೆ ಮಾತನಾಡಿರುವ ವೈದ್ಯರು, ಮಹಿಳೆ ಸೆಲ್ಫ್ಯೂರಿಕ್ ಆಮ್ಲದ ವಿಷವನ್ನು ಸೇವಿಸಿದ್ದಳು. ಚಿಕಿತ್ಸೆ ನೀಡುವ ವೇಳೆ ವೈದ್ಯರು ಆಕೆಗೆ ಆಮ್ಲಜನಕ ಪೂರೈಸಲು ಬಾಯಿಗೆ ಪೈಪ್ ಅಳವಡಿಸಲಾಗಿದೆ. ಆಗ ಸೆಲ್ಫ್ಯೂರಿಕ್ ಆಮ್ಲ ಹಾಗೂ ಆಮ್ಲಜನಕ ಒಂದಕ್ಕೊಂದು ಸಂಪರ್ಕಕ್ಕೆ ಬಂದು ಸ್ಪೋಟ ಸಂಭವಿಸಿದೆ ಎಂದಿದ್ದಾರೆ.
ಈ ಘಟನೆ ಕುರಿತಾಗಿ ನಿಖರ ಕಾರಣ ತಿಳಿಯಲು ಸಂಶೋಧನೆ ನಡೆಸಲು ನಿರ್ಧರಿಸಲಾಗಿದೆ.
Discussion about this post