ಕಲ್ಪ ಮೀಡಿಯಾ ಹೌಸ್ | ಶ್ರೀಹರಿಕೋಟಾ |
ಭಾರತದ ಇತಿಹಾಸದಲ್ಲಿ ಮಹತ್ವದ ಕ್ಷಣವೊಂದಕ್ಕೆ ಸಾಕ್ಷಿಯಾಗುವ ಗಳಿಗೆ ಹತ್ತಿರ ಬರುತ್ತಿದ್ದಂತೆಯೇ ದೇಶವಾಸಿಗಳ ಕುತೂಹಲ ಹೆಚ್ಚಾಗುತ್ತಿದೆ. ಚಂದ್ರಯಾನ 3 #Chandrayana3 ಮಿಷನ್ ಪೂರ್ಣಗೊಳ್ಳಲಿ ಎಂದು ಇಡೀ ಭಾರತವೇ ಪ್ರಾರ್ಥಿಸುತ್ತಿದೆ.
ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಚಂದ್ರಯಾನ-3 ಉಪಗ್ರಹ ಇಂದು ಮಧ್ಯಾಹ್ನ 2.35ಕ್ಕೆ ಉಡಾವಣೆಯಾಗಲಿದ್ದು, ಇದಕ್ಕಾಗಿ ನಮ್ಮ ವಿಜ್ಞಾನಿಗಳು ವರ್ಷಗಟ್ಟಲೆ ಹಗಲು ರಾತ್ರಿ ಶ್ರಮಿಸಿದ್ದಾರೆ. ಪ್ರಮುಖ ವಿಚಾರವೆಂದರೆ ಈ ಶ್ರಮದ ಹಿಂದೆ ಮಹಿಳಾ ವಿಜ್ಞಾನಿ #Scientist ಹಾಗೂ ಸಿಬ್ಬಂದಿಗಳು ಪಾತ್ರವೂ ಸಹ ದೊಡ್ಡದಿದೆ ಎಂಬುದನ್ನು ಪ್ರತಿ ಭಾರತೀಯನೂ ತಿಳಿಯಬೇಕಿದೆ.

ಚಂದ್ರಯಾನ 2 ಮಿಷನ್ ಉಡಾವಣೆಯ ಸಂದರ್ಭದಲ್ಲಿ ಆದ ಸಣ್ಣ ಪುಟ್ಟ ತಪ್ಪುಗಳು ಮರುಕಳಿಸದಂತೆ ವಿಜ್ಞಾನಿಗಳು ಭಾರೀ ಎಚ್ಚರಿಕೆ ವಹಿಸಿದ್ದಾರೆ. ಉಪಯೋಜನಾ ನಿರ್ದೇಶಕರು , ಯೋಜನ ವ್ಯವಸ್ಥಾಪಕಿ, ಸಹಾಯಕ ವಿಜ್ಞಾನಿ ಹೀಗೆ ನಾನಾ ಹುದ್ದೆಯನ್ನು ಮಹಿಳಾ ವಿಜ್ಞಾನಿಗಳು ಅಲಂಕರಿಸಿದ್ದಾರೆ ಎಂದು ಇಸ್ರೋ ಮಾಹಿತಿ ನೀಡಿದೆ.

ಮತ್ತೊಂದೆಡೆ, ಚಂದ್ರಯಾನ-3 ಯೋಜನೆಯಲ್ಲಿ ಮಿಷನ್ ನಿರ್ದೇಶಕರು ಮೋಹನ್ ಕುಮಾರ್, ವಾಹನ/ರಾಕೆಟ್ ನಿರ್ದೇಶಕರು ಬಿಜು ಸಿ. ಥಾಮಸ್ ಮತ್ತು ಬಾಹ್ಯಾಕಾಶ ನೌಕೆಯ ನಿರ್ದೇಶಕರು ಡಾ.ಪಿ. ವೀರಮುತ್ತುವೆಲ್, ಶ್ರೀಹರಿಕೋಟಾ ರಾಕೆಟ್ ಬಂದರಿನ ಅಧಿಕಾರಿ ಮತ್ತು ರಾಕೆಟ್ ಉಡಾವಣೆ ಸಮಯದಲ್ಲಿ ವ್ಯಾಖ್ಯಾನಕಾರರಾದ ಪಿ.ಮಾಧುರಿ ಮಾತ್ರ ಜನರಿಗೆ ಗೋಚರಿಸುವ ಏಕೈಕ ಇಸ್ರೋ ಮಹಿಳೆಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post