ವಿಲೇಜ್ ಡಿಫೆನ್ಸ್ ಡಾರ್ಗ್ಸ್’ಗಳು ಇಬ್ಬರನ್ನು ಅಪಹರಣ ಮಾಡಿರುವ ಭಯೋತ್ಪಾದಕರು #Terrorist ಅವರನ್ನು ಗಲ್ಲಿಗೇರಿಸಿರುವ ಘಟನೆ ಕಣಿವೆ ರಾಜ್ಯ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಸಿಬ್ಬಂದಿಗಳನ್ನು ಕುಲದೀಪ್ ಕುಮಾರ್ ಹಾಗೂ ನಜೀರ್ ಅಹ್ಮದ್ ಎಂದು ಗುರುತಿಸಲಾಗಿದೆ. ಮೃತರಾದ ಇಬ್ಬರು ಸಿಬ್ಬಂದಿ ಸ್ಥಳೀಯ ಸಮುದಾಯಗಳನ್ನು ಭಯೋತ್ಪಾದಕರಿಂದ ರಕ್ಷಿಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಥಾಪಿಸಿದ ಗ್ರಾಮ ರಕ್ಷಣಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಇಬ್ಬರು ವ್ಯಕ್ತಿಗಳು ಅಧ್ವಾರಿ ಪ್ರದೇಶದ ಮುಂಜ್ಲಾ ಧಾರ್ ಅರಣ್ಯದಲ್ಲಿ ದನ ಮೇಯಿಸಲು ಹೋಗಿದ್ದರು, ಆದರೆ ವಾಪಸಾಗಿರಲಿಲ್ಲ. ಹೀಗಾಗಿ ಅವರನ್ನು ಅಪಹರಿಸಿದಾರೆ ಎಂಬ ಅನುಮಾನ ಮೂಡಿತ್ತು. ಸಂತ್ರಸ್ತರ ಕುಟುಂಬ ಸದಸ್ಯರು ಅಪಹರಣವನ್ನು ದೃಢಪಡಿಸಿದ್ದರು. ಕುಲದೀಪ್ ಕುಮಾರ್ ಅವರ ಸಹೋದರ ಪೃಥ್ವಿ, ಅವರ ಸಹೋದರ ಮತ್ತು ಅಹ್ಮದ್ ಅವರನ್ನು ಭಯೋತ್ಪಾದಕರು ಕರೆದೆಯ್ದಿದ್ದಾರೆ ಎಂದು ಹೇಳಿದ್ದಾರೆ. ನನ್ನ ಸಹೋದರ ಮತ್ತು ಅಹ್ಮದ್ ಅವರನ್ನು ಭಯೋತ್ಪಾದಕರು ಅಪಹರಿಸಿ ಕೊಂದಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ ಎಂದು ಪೃಥ್ವಿ ತಿಳಿಸಿದ್ದಾರೆ. ದಟ್ಟ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನೆಯಿಂದ ದೊಡ್ಡಮಟ್ಟದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಗುಂಪಿನ ಒಂದು ಶಾಖೆಯಾದ ಕಾಶ್ಮೀರ ಟೈಗರ್ಸ್ ಹತ್ಯೆಯ ಹೊಣೆ ಹೊತ್ತುಕೊಂಡಿತು. ಅವರು ಸಂತ್ರಸ್ತರ ದೇಹಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.
ಸ್ಥಳೀಯ ಪೊಲೀಸರು ಭಯೋತ್ಪಾದಕರನ್ನು ಪತ್ತೆಹಚ್ಚಲು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
Discussion about this post