ಕಲ್ಪ ಮೀಡಿಯಾ ಹೌಸ್ | ಶ್ರೀನಗರ |
ಕಿರುತೆರೆ ನಟಿ ಅಮ್ರೀನ್ ಭಟ್ Small screen Actress Amrin Bhat ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಲಷ್ಕರ್ ಉಗ್ರರನ್ನು Lashkar terrorist ಭಾರತೀಯ ಸೇನಾ ಯೋಧರು Indian army ಅಟ್ಟಾಡಿಸಿ ಬೇಟೆಯಾಡಿದ್ದಾರೆ.
ಸೌರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗದಲ್ಲಿ ಎಲ್’ಇಟಿ ಉಗ್ರರನ್ನು ಇಂದು ಮುಂಜಾನೆ ನ್’ಕೌಂಟರ್ ಮಾಡಿದ್ದಾರೆ. ಹತ್ಯೆಯಾದ ಎಲ್‌ಇಟಿ ಉಗ್ರರನ್ನು ಶಾಕಿರ್ ಅಹ್ಮದ್ ವಾಜಾ ಮತ್ತು ಅಫ್ರೀನ್ ಅಫ್ತಾಬ್ ಮಲಿಕ್ ಎಂದು ಗುರುತಿಸಲಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸೇನಾಧಿಕಾರಿಗಳು ಅವಂತಿಪೋರಾದ ಪ್ರದೇಶದಲ್ಲಿ ಉಗ್ರರು ಸಿಕ್ಕಿ ಬಿದ್ದಿದ್ದರು. ಅಲ್ಲದೇ ಇತ್ತೀಚೆಗೆ ಕಿರುತೆರೆ ನಟಿ ಅಮ್ರೀನ್ ಭಟ್ ಹತ್ಯೆಯಲ್ಲಿ ಇಬ್ಬರು ಭಾಗಿಯಾಗಿದ್ದರು ಎಂದಿದ್ದಾರೆ.
ಈ ಪ್ರದೇಶದಲ್ಲಿ ಇನ್ನೂ ಉಗ್ರರು ಅಡಗಿರುವ ಕುರಿತಾಗಿ ಮಾಹಿತಿಯಿರುವ ಹಿನ್ನೆಲೆಯಲ್ಲಿ ಸೇನಾಪಡೆಗಳು ಶೋಧ ಕಾರ್ಯ ನಡೆಸುತ್ತಿವೆ.
ಉಗ್ರರನ್ನು ಹತ್ಯೆ ಮಾಡಿರುವ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಳೆದ ೩ ದಿನಗಳಲ್ಲಿ ಒಟ್ಟು 10 ಉಗ್ರರು, 7 ಎಲ್‌ಇಟಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post