ಕಲ್ಪ ಮೀಡಿಯಾ ಹೌಸ್ | ಸಿಗಂಧೂರು/ಶಿವಮೊಗ್ಗ |
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಸ್ಪರ್ಧೆ ಘೋಷಿಸಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ಅವರ ಕ್ಷೇತ್ರದ ವಿವಿಧ ಮಠ ಹಾಗೂ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.
ಇಂದು ತಮ್ಮ ಪುತ್ರ ಕೆ.ಈ. ಕಾಂತೇಶ್ ಹಾಗೂ ಬೆಂಬಲಿಗರೊಂದಿಗೆ ಸಿಗಂಧೂರಿಗೆ ತೆರಳಿದ ಈಶ್ವರಪ್ಪ ಅವರು, ಶ್ರೀ ಚೌಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಶ್ರೀಕ್ಷೇತ್ರದ ಧರ್ಮದರ್ಶಿ ರಾಮಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ, ಅವರ ಆರ್ಶೀವಾದ ಪಡೆದರು.
ಇನ್ನು, ನಿನ್ನೆ ಭದ್ರಾವತಿ ಕ್ಷೇತ್ರ ವ್ಯಾಪ್ತಿಯ ಭದ್ರಗಿರಿ ದೇವಸ್ಥಾನ, ಬಿಳಕಿ ಶ್ರೀಮಠ, ಗೋಣಿಬೀಡು ಮಠ, ಬೆಳ್ಳಿಗಾವಿ ಶ್ರೀ ಸಿದ್ಧೇಶ್ವರ ದೇವಸ್ಥಾನ, ತೊಗರ್ಸಿ ಮಲ್ಲಿಕಾರ್ಜುನ ದೇವಸ್ಥಾನ, ಜಡೆ ಮಠ, ಹಿರೇಮಾಗಡಿ, ಶಾಂತಪುರ ಮಠ, ಜಡೇ ಹಿರೇಮಠ, ಹರ‍್ನಳ್ಳಿ ಚೌಕಿ ಮಠ ಸೇರಿದಂತೆ ವಿವಿಧ ಮಠಗಳಿಗೆ ಭೇಟಿ ನೀಡಿ ಸ್ವಾಮಿಗಳ ಆರ್ಶೀವಾದ ಬೇಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















