ಕಲ್ಪ ಮೀಡಿಯಾ ಹೌಸ್ | ಶಿರಸಿ |
ರಾಜ್ಯದ ಅತಿ ದೊಡ್ಡ ಜಾತ್ರೆ ಎಂದು ಖ್ಯಾತವಾಗಿರುವ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ Sirsi Marikamba Jathre ಇಂದು ರಾತ್ರಿ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ.
ಮಾರ್ಚ್ 15ರ ಇಂದು ರಾತ್ರಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ರಾತ್ರಿ 11.18ರಿಂದ 11.27ರೊಳಗೆ ಸಭಾ ಮಂಟಪದ ರಂಗ ಮಂಟಪದಲ್ಲಿ ಮತ್ತು ರಾತ್ರಿ 11.27ರ ನಂತರ ರಾಜೋಪಚಾರಾದಿ ವಿನಿಯೋಗಗಳು ನಡೆಯಲಿವೆ.
ಮಾರ್ಚ್ 16ರಂದು ಶ್ರೀದೇವಿಯ ರಥಾರೋಹಣ ಮೆರವಣಿಗೆ ಬೆಳಗ್ಗೆ 7.3ರಿಂದ ಪ್ರಾರಂಭವಾಗಿ ಮಧ್ಯಾಹ್ನ 12.45ರಿಮದ 12.57ರ ಒಳಗೆ ಬಿಡ್ಕಿ ಬೈಲಿನ ಜಾತ್ರಾ ಸ್ಥಳದ ಪೀಠದಲ್ಲಿ ಸ್ಥಾಪನೆ ಮಾಡಲಾಗುತ್ತದೆ.
ಮಾರ್ಚ್ 17ರಿಂದ 22ರವರೆಗೂ ವಿವಿಧ ಸೇವೆಗಳು ನಡೆಯಲಿವೆ. ಬೆಳಗ್ಗೆ 5 ರಿಂದ 10 ಗಂಟೆಯವರೆಗೂ ಹಣ್ಣು-ಕಾಯಿ, ಕಾಣಿಕೆ, ಹರಕೆ, ತುಲಾಭಾರ ಸೇವೆಗಳು ನಡೆಯಲಿದ್ದು, ಮರ್ಕಿ-ದುರ್ಗಿ ದೇವಸ್ಥಾನದಲ್ಲಿ ಬೇವಿನ ಉಡಿಗೆ ಸೇವೆ ಬೆಳಗ್ಗೆ 6ರಿಂದ ಸಂಜೆ 5 ಗಂಟೆಯವೆಗೂ ನಡೆಯಲಿದೆ.
ಮಾರ್ಚ್ 23ರಂದು ಜಾತ್ರೆ ಮುಕ್ತಾಯದ ಕಾರ್ಯಕ್ರಮಗಳು ನಡೆಯಲಿದ್ದು, ಅಂದು ಬೆಳಗ್ಗೆ 9 ಗಂಟೆಯವರೆಗೂ ಮಾತ್ರ ಸೇವೆಗಳಿಗೆ ಅವಕಾಶವಿರುತ್ತದೆ.
Also read: ವಿದ್ಯಾರ್ಥಿ ಜೀವನವು ಶಿಸ್ತು, ಸಂಯಮದಿಂದ ಕೂಡಿರಬೇಕು: ಎಮ್‌ಎಲ್‌ಸಿ ಆಯನೂರು ಮಂಜುನಾಥ್
ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ಸೇರಿದಂತೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದರೊಂದಿಗೆ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಜಾತ್ರಾ ಸಮಿತಿ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post