ಚಿಕ್ಕೋಡಿ: ಹಾವು ಕಚ್ಚಿದ ಪರಿಣಾಮ ಆಟವಾಡುತ್ತಿದ್ದ 14 ತಿಂಗಳ ಮಗುವೊಂದು ಸಾವನ್ನಪ್ಪಿರುವ ಧಾರುಣ ಘಟನೆ ಅಥಣಿ ತಾಲೂಕಿನ ಪಾರ್ಥನಹಳ್ಳಿಯಲ್ಲಿ ನಡೆದಿದೆ.
ಪಾರ್ಥನಹಳ್ಳಿ ಗ್ರಾಮದ ಯಾಕೂಬ ಬಿರಾದಾರ ಅವರ ಮನೆಯಲ್ಲಿ ಅವರ ಮೊಮ್ಮಗಳು ಆಟವಾಡುತ್ತಿದ್ದಳು. ಈ ವೇಳೆ ಹಾವೊಂದು ಮನೆ ಪ್ರವೇಶಿಸಿದ್ದು ಇದನ್ನು ಗಮನಿಸಿದ ಮಗುವಿನ ತಾಯಿ ಕೂಗಿದ್ದಾಳೆ.
ಸಮೀಪದಲ್ಲೇ ಇದ್ದ ಯಾಕೂಬ ಓಡಿ ಬಂದು ಮಗುವನ್ನು ರಕ್ಷಿಸಬೇಕು ಎನ್ನುವಷ್ಟರಲ್ಲಿ ಮಗುವಿಗೆ ಹಾವು ಕಚ್ಚಿದೆ. ತತಕ್ಷಣ ಮಗುವನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಆಸ್ಪತ್ರೆಗೆ ತಲುಪುವ ಮೊದಲೇ ಮಗು ಮೃತಪಟ್ಟಿದೆ.
ಈ ಘಟನೆ ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Discussion about this post