ನವದೆಹಲಿ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ನೂತನ ಫೀಚರ್ ಬಿಡುಗಡೆ ಮಾಡಿರುವ ವಾಟ್ಸಪ್, ನಕಲಿ ಸಂದೇಶ ರವಾನೆ ತಡೆಗೆ ಪ್ರಮುಖ ಹೆಜ್ಜೆಯನ್ನಿಟ್ಟಿದೆ.
ನಿಮಗೆ ಬರುವ ಸಂದೇಶಗಳಲ್ಲಿ ಅಸಲಿ ಹಾಗೂ ನಕಲಿ ಪರೀಕ್ಷಿಸಿ, ನಿಮಗೆ ಅಗತ್ಯವಿದ್ದಲ್ಲಿ ಮಾತ್ರ ಅಪ್ರೂವ್ ಮಾಡುವ ಅವಕಾಶವನ್ನು ಕಲ್ಪಿಸಿದೆ.
ನಕಲಿ ಸಂದೇಶ ರವಾನೆ ಮಾಡಿಕೊಂಡು ದೇಶದಾದ್ಯಂತ ಇದುವರೆಗೂ ಸುಮಾರು 29 ಮಕ್ಕಳ ಕಳ್ಳತನಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಈ ನೂತನ ಫೀಚರ್ ಕಲ್ಪಿಸಲಾಗಿದೆ.
together we can curb the issue of fake news ಎಂಬ ಸಾಲುಗಳೊಂದಿಗೆ ವಾಟ್ಸಪ್ ಈ ಹೊಸ ಅವಕಾಶವನ್ನು ನೀಡಲಾಗಿದೆ.
ನೂತನ ಅವಕಾಶದಲ್ಲಿ ಪ್ರತಿ ಸಂದೇಶವನ್ನು ಸೂಕ್ಷ್ಮವಾಗಿ ಅವಲೋಕಿಸಬಹುದಾಗಿದ್ದು, ಫೋಟೋಗಳನ್ನೂ ಸಹ ವೀಕ್ಷಿಸಿ, ಆನಂತರ ಅಗತ್ಯವಿದ್ದರೆ ಅಪ್ರೂವ್ ಮಾಡಬಹುದು.
ಸಂದೇಶದ ಲಿಂಕ್ ಸಹ ನೋಡಬಹುದಾಗಿದ್ದು, ನಕಲಿ ಸಂದೇಶಗಳೇ ಎಂದು ಪರೀಕ್ಷಿಸಿ, ಆನಂತರ ಫಾರ್ ವರ್ಡ್ ಮಾಡಬಹುದು ಎಂದು ವಾಟ್ಸಪ್ ಹೇಳಿದೆ.
Discussion about this post