ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ದಿಕ್ಕಿಲ್ಲದವರನ್ನು ತಾತ್ಸಾರದಿಂದಲೇ ನೋಡುವ ಈ ಕಾಲದಲ್ಲಿ ನಿರಾಶ್ರಿತರಿಗೆ ಉಚಿತ ಕ್ಷೌರ ಮಾಡುವ ಮೂಲಕ ಮಾದರಿ ಕಾರ್ಯವೊಂದನ್ನು ಸವಿತಾ ಸಮಾಜ ಹಾಗೂ ಸ್ನೇಹ ಜೀವಿ ಬಳಗ ಮಾಡಿದೆ.
ನ್ಯೂಟೌನ್ ತಮಿಳು ಸರ್ಕಾರಿ ಶಾಲೆ ಹಿಂಭಾಗದ ಖಾಲಿ ಜಾಗದಲ್ಲಿ ಸಮಾಜ ಸೇವಕ ರೋಸಯ್ಯನವರ ಸ್ಮರಣಾರ್ಥ ನಿರಾಶ್ರಿತರಿಗೆ ಉಚಿತ ಕ್ಷೌರ ಕೈಗೊಳ್ಳುವ ಮೂಲಕ ಸೇವಾ ಕಾರ್ಯ ನಡೆಸಲಾಯಿತು.
ತಮ್ಮ ತಂದೆಯವರಂತೆಯೇ ಸೇವಾ ಕಾರ್ಯವನ್ನು ಮುಂದುವರೆಸಿರುವ ಅವರ ಪುತ್ರ ಮೋಸಸ್ ಅವರು, ನಿರಾಶ್ರಿತರಿಗೆ ಉಚಿತ ಕ್ಷೌರ ವ್ಯವಸ್ಥೆ ಕಲ್ಪಿಸುವ ಮೂಲಕ ಅವರ ವೈಯಕ್ತಿಕ ಶುಚಿತ್ವದ ಬಗ್ಗೆ ಕಾಳಜಿ ವಹಿಸುವ ಮಾದರಿ ಕಾರ್ಯ ಮಾಡಿದ್ದಾರೆ.
ಇನ್ನು, ಸಮಾಜ ಸೇವೆಯಲ್ಲಿ ಮುಂದಿರುವ ನಗರದ ಸ್ನೇಹ ಜೀವಿ ಬಳಗ ಹಾಗೂ ಸವಿತಾ ಸಮಾಜ ಈ ಸೇವಾ ಕಾರ್ಯಕ್ಕೆ ಕೈಜೋಡಿಸಿತ್ತು.
ಕ್ರೈಸ್ತ ಧರ್ಮಗುರುಗಳು, ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್, ಸವಿತಾ ಸಮಾಜದ ಮುಖ್ಯಸ್ಥರು ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post