ಕಲ್ಪ ಮೀಡಿಯಾ ಹೌಸ್ | ಸೊಮಾಲಿಯಾ |
ಇಲ್ಲಿನ ಕರಾವಳಿ ಬಳಿಯಲ್ಲಿ 15 ಭಾರತೀಯರಿದ್ದ ಹಡಗೊಂಡನ್ನು ಅಪಹರಣ Ship hijacked near Somalia ಮಾಡಿರುವ ಘಟನೆ ನಡೆದಿದೆ.
ಭಾರತೀಯ ನೌಕಾಪಡೆಯ ಮಾಹಿತಿಯಂತೆ, ನಿನ್ನೆ ಸಂಜೆ ಲೈಬೀರಿಯನ್ ಧ್ವಜದ ಹಡಗನ್ನು ಅಪಹರಣ ಮಾಡಲಾಗಿದ್ದು, ಇದರಲ್ಲಿ 15 ಭಾರತೀಯರೂ ಸಹ ಇದ್ದರು ಎಂದಿದೆ.
ಈ ಹಡಗಿನಲ್ಲಿ 15 ಭಾರತೀಯ ಸಿಬ್ಬಂದಿ ಇದ್ದಾರೆ ಎಂಬ ಖಚಿತ ಮಾಹಿತಿಯಿದ್ದು, ಇದೀಗ ಈ ಹಡಗನ್ನು ಭಾರತೀಯ ನೌಕಾಪಡೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಲಾಗಿದೆ.
Also read: 20 ಕಿಮೀವರೆಗೆ ಪರ್ಮಿಷನ್, ಸ್ಟಿಕ್ಕರ್’ಗೆ ವಿನಾಯ್ತಿ ನೀಡಿ: ಡಿಸಿಗೆ ಆಟೋ ಚಾಲಕರ ಮನವಿ
ಲೈಬೀರಿಯನ್ ಧ್ವಜದ ಹಡಗು ಎಂವಿ ಲೀಲಾ ನಾರ್ಫೋಕ್ ಎಂದು ಗುರುತಿಸಲಾಗಿದೆ. ಹಡಗನ್ನು ಅಪಹರಣ ಮಾಡಿರುವ ಬಗ್ಗೆ ಭಾರತೀಯ ನೌಕಾಪಡೆ ನಿನ್ನೆ ಸಂಜೆ ಮಾಹಿತಿ ನೀಡಲಾಗಿದೆ.
ಅಪಹರಣಕ್ಕೊಳಗಾದ ಹಡಗಿನ ಚಲನವಲನಗಳ ಮೇಲೆ ನಿರಂತರವಾಗಿ ನಿಗಾ ಇಡಲು ಭಾರತೀಯ ನೌಕಾಪಡೆಯ ವಿಮಾನಗಳನ್ನು ನಿಯೋಜಿಸಲಾಗಿದೆ.
ಹೈಜಾಕ್ ಆಗಿರುವ ಹಡಗಿನ ಸಿಬ್ಬಂದಿಯೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post