ಕಲ್ಪ ಮೀಡಿಯಾ ಹೌಸ್ | ಸೊರಬ |
ವಿಷದ ಹುಲ್ಲು ಸೇವಿಸಿ 8 ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕು ಕೆರೆಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ.
ಜಮೀನಿನಲ್ಲಿ ಮೆಕ್ಕೆಜೋಳ ಕಟಾವು ಮಾಡಿದ್ದು, ಅದರಲ್ಲಿ ಬೆಳೆದ ಮರುಕೊಳೆ ಹುಲ್ಲು ಸೇವಿಸಿದ 10 ಜಾನುವಾರುಗಳು ಅಸ್ವಸ್ಥಗೊಂಡಿದ್ದವು. ದ್ಯಾವರಾಯಪ್ಪ ಮತ್ತು ರಾಮಣ್ಣ ಎಂಬುವವರಿಗೆ ಸೇರಿದ ತಲಾ ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ.
ಪಶು ವೈದ್ಯರು ಚಿಕಿತ್ಸೆ ನೀಡಿದ್ದರಿಂದ ಎರಡು ಜಾನುವಾರುಗಳು ಬದುಕುಳಿದಿವೆ ಎನ್ನಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















