ಕಲ್ಪ ಮೀಡಿಯಾ ಹೌಸ್ | ಸೊರಬ |
ಜಿಲ್ಲೆ ಶಿವ-ಶರಣರ ನಾಡಾಗಿದ್ದು, ಅಕ್ಕಮಹಾದೇವಿ ಸೇರಿದಂತೆ ಅನೇಕ ವಚನಕಾರ್ತಿಯರು ಲೋಕದ ಡೊಂಕನ್ನು ತಿದ್ದುವ ಕೆಲಸ ಮಾಡಿದರು. ಆಧುನಿಕತೆಯ ಯುಗದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಆಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದರು.
ತಾಲೂಕಿನ ಆನವಟ್ಟಿ ಪಟ್ಟಣದ ವೀರಶೈವ ಸಮುದಾಯ ಭವನದಲ್ಲಿ ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಜಿಲ್ಲಾ ಮಹಿಳಾ ಘಟಕದಿಂದ ಹಮ್ಮಿಕೊಂಡ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ನಡೆದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ, ಅನೇಕ ಮಹಿಳೆಯರು ಕುಟುಂಬ ನಿರ್ವಹಣೆಯ ಜೊತೆಗೆ ಉದ್ಯೋಗದಲ್ಲಿ ಸಹ ಸೈ ಎನಿಸಿಕೊಂಡಿದ್ದಾರೆ. ಮಹಿಳೆಯರು ಸಮಾನತೆ ದೊರೆತಿಲ್ಲ ಎನ್ನುವ ಮಾನಸಿಕ ಕೀಳರಿಮೆಯಿಂದ ಹೊರಬಂದು, ವಿಶಾಲ ದೃಷ್ಟಿಕೋನದಿಂದ ನೋಡುವುದನ್ನು ಕಲಿಯಬೇಕು ಎಂದರು.
Also read: ಶಾಂತವೇರಿ ಗೋಪಾಲ ಗೌಡರ ಹೆಸರಿನಲ್ಲಿ ಉತ್ತಮ ಕೃಷಿಕ ಹಾಗೂ ಶಾಸಕ ಪ್ರಶಸ್ತಿ ಘೋಷಣೆ
ಅಂತರಾಷ್ಟ್ರೀಯ ಯೋಗಪಟು ವಿ. ತನ್ವಿತಾ, ದೈವಿಕ ವೈದ್ಯೆ ಪ್ರೇಮಲತಾ ಗುರುರಾಜರಾವ್ ಮಳೂರು, ರಾಜ್ಯ ಪ್ರಶಸ್ತಿ ಪುರಸ್ಕೃತ ಭರತನಾಟ್ಯ ಶಿಕ್ಷಕಿ ಶಿಲ್ಪಾ ಅನೂಪ್, ಕಲಾವಿದೆ ಸುಲೋಚನಮ್ಮ ರಾಜಶೇಖರಪ್ಪ, ಸೂಲಗಿತ್ತಿ ಲೆಕ್ಕಮ್ಮ ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಯಿತು.

ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಜಿಲ್ಲಾಧ್ಯಕ್ಷೆ ಸುಧಾ ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಅಧ್ಯಕ್ಷ ಎಸ್.ಜಿ. ರಾಮಚಂದ್ರಪ್ಪ, ಮಹಿಳಾ ಘಟಕ ರಾಜ್ಯಾಧ್ಯಕ್ಷೆ ವಾಣಿಶ್ರೀ, ಪುರಸಭೆ ಅಧ್ಯಕ್ಷ ವೀರೇಶ್ ಮೇಸ್ತ್ರಿ, ಕುಸುಮಾ ಪಾಟೀಲ್, ಗೀತಾ ಮಲ್ಲಿಕಾರ್ಜುನ್, ಪ್ರೇಮಲತಾ, ಶಿಲ್ಪಾ, ಸುನಿತಾ, ಮಮತಾ, ಲಕ್ಷ್ಮಿ ಸೇರಿದಂತೆ ಇತರರಿದ್ದರು.

ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















